ನಾಳೆ ಪುನೀತ್ ರಾಜ್ ಕುಮಾರ್ 2ನೇ ಪುಣ್ಯಸ್ಮರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ (Puneeth Rajkumar) ಅಗಲಿ ನಾಳೆಗೆ ಎರಡು ವರ್ಷ. ಹೀಗಾಗಿ ಅವರ ಪುಣ್ಯ ಸ್ಮರಣೆಯನ್ನು (Punyasmarane) ಆಚರಿಸಲು ಅಭಿಮಾನಿಗಳು ಮತ್ತು ಕುಟುಂಬ ಸರ್ವಸಿದ್ಧತೆ ಮಾಡಿಕೊಂಡಿದೆ.

ನಾಳೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೈಸೂರು ಮಾದರಿಯಲ್ಲೇ ಲೈಟಿಂಗ್ ಸೇರಿದಂತೆ ನೇತ್ರದಾನ, ಅನ್ನದಾನ ಶಿಬಿರಗಳನ್ನೂ ಏರ್ಪಡಿಸಿದ್ದಾರೆ.

ಕುಟುಂಬವು ಡಾ.ರಾಜಕುಮಾರ್ ಸಮಾಧಿ ಮಾದರಿಯಲ್ಲೇ ಅಪ್ಪು (Appu) ಸಮಾಧಿಯನ್ನು ನಿರ್ಮಾಣ ಮಾಡಿದೆ.ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಸಮಾಧಿ ಮೇಲೆ ಅಪ್ಪುವಿನ ನಗುಮೊಗದ ಫೋಟೋ ಇಡಲಾಗಿದೆ.

ನಾಳೆ ಬೆಳಗ್ಗೆ 9 ಗಂಟೆಗೆ ಡಾ.ರಾಜ್ ಕುಟುಂಬ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಅಶ್ವಿನಿ (Ashwini) ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಇಡೀ ಕುಟುಂಬ ಪೂಜೆಯಲ್ಲಿ ಭಾಗಿಯಾಗಲಿದೆ.
ಅಕ್ಟೋಬರ್ 29ರಂದು ಪುನೀತ್ ಅವರನ್ನು ಈ ನಾಡು ಕಳೆದುಕೊಂಡಿತು. ಅಲ್ಲಿಂದ ಈವರೆಗೂ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!