ಹಿಂದುಗಳ ಹೊಸ ವರ್ಷ ಯುಗಾದಿ ನಾಳೆ ಆರಂಭವಾಗಲಿದ್ದು,ಪೂಜೆ ಸಲ್ಲಿಸಲು ಬೆಳಗ್ಗೆ 5 ರಿಂದ 7.30 ರವರೆಗೆ ಶುಭ ಸಮಯವಿದೆ. ಅಲ್ಲದೆ ಬೆಳಿಗ್ಗೆ 9 ರಿಂದ 11.30 ರವರೆಗೆ. ಈ ದಿನದಂದು ಏನೆಲ್ಲಾ ಮಾಡಬೇಕು? ಏನು ಮಾಡಬಾರದು ಇಲ್ಲಿದೆ ಡೀಟೇಲ್ಸ್..
ಏನು ಮಾಡಬೇಕು?
ಯುಗಾದಿಯನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹಿಂದಿನ ದಿನ ಮನೆಯನ್ನು ಸ್ವಚ್ಛಗೊಳಿಸಬೇಕು.
ಯುಗಾದಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು
ಮನೆಯನ್ನು ಸ್ವಚ್ಛಗೊಳಿಸಿ ಮತ್ತು ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ಮನೆಯನ್ನು ಹೂವಿನಿಂದ ಜೊತೆಗೆ ಮಾವಿನ ಎಲೆಯ ತೋರಣದಿಂದ ಅಲಂಕರಿಸಿ.
ನೀವು ನಿಮ್ಮ ಕೂದಲಿಗೆ ಎಳ್ಳೆಣ್ಣೆಯನ್ನು ಹಚ್ಚಿ ನಂತರ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿ.
ಹೊಸ ಬಟ್ಟೆಗಳನ್ನು ಧರಿಸಬೇಕು. ನಿಮ್ಮ ಹಣೆಯ ಮೇಲೆ ಕುಂಕುಮ ಇರಲಿ.
ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸಿ.
ಏನು ಮಾಡಬಾರದು?
ಯುಗಾದಿಯಂದು, ತಪ್ಪಾಗಿಯಾದರೂ ಇತರರೊಂದಿಗೆ ಜಗಳವಾಡಬೇಡಿ ಅಥವಾ ವಾದಿಸಬೇಡಿ.
ಹಣ ಕೊಡುವುದು ಅಥವಾ ಸಾಲ ಪಡೆಯುವುದು ಮುಂತಾದ ಕೆಲಸಗಳನ್ನು ಸಹ ಮಾಡಬೇಡಿ.
ಯುಗಾದಿಯಂದು ತಾಮಸಿಕ ಆಹಾರವನ್ನು ಸೇವಿಸಬೇಡಿ. ಮಾಂಸ ತಿನ್ನಬೇಡಿ ಅಥವಾ ಮದ್ಯಪಾನ ಮಾಡಬೇಡಿ.
ಕೂದಲು ಕತ್ತರಿಸುವುದು ಅಥವಾ ಉಗುರು ಕತ್ತರಿಸುವುದು ಕೂಡ ಒಳ್ಳೆಯದಲ್ಲ.
ಯುಗಾದಿಯಂದು ಹರಿದ ಬಟ್ಟೆಗಳನ್ನು ಧರಿಸಬೇಡಿ. ಸಾಧ್ಯವಾದರೆ ಹೊಸ ಬಟ್ಟೆಯನ್ನು ಧರಿಸಿ.