ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಬೆಂಗಳೂರಿನ ಫೇಮಸ್‌ ದೋಸೆ ತಿಂದೆ; ಸಿಎಂ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಫೇಮಸ್‌ ದೋಸೆಪಾಯಿಂಟ್‌ಗಳಲ್ಲಿ ಮೊದಲನೆಯದಾದ ಮಲ್ಲೇಶ್ವರಂನ ಸೆಂಟ್ರಲ್‌ ಟಿಫನ್‌ ರೂಮ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ದೋಸೆ ತಿಂದಿದ್ದಾರೆ.

ಬಿಸಿ ಬಿಸಿ ಕ್ರಿಸ್ಪಿ ದೋಸೆ ತಿಂದು, ಒಂದೊಳ್ಳೆ ಫಿಲ್ಟರ್‌ ಕಾಫಿ ಕುಡಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಸಿಟಿಆರ್ ಎಂದೇ ಜನಪ್ರಿಯವಾಗಿರುವ ಮಲ್ಲೇಶ್ವರಂನ ಸೆಂಟ್ರಲ್ ಟಿಫಿನ್ ರೂಮ್‌‌ಗೆ ಹೋಗಿದ್ದೆ. ವರ್ಷಗಳ ಹಿಂದೆ ಅಲ್ಲಿ ದೋಸೆ ತಿಂದದ್ದು ನೆನಪಾಯಿತು. ದೋಸೆಯ ರುಚಿಯ ಗುಣಮಟ್ಟವನ್ನು ಈಗಲೂ ಸಿಟಿಆರ್ ನಲ್ಲಿ ಕಾಯ್ದುಕೊಂಡು ಬಂದಿದ್ದಾರೆ ಎನ್ನುವುದು ಇಂದು ಅಲ್ಲಿ ಮತ್ತೆ ಮಸಾಲೆ ದೋಸೆ ತಿನ್ನುವಾಗ ಮನವರಿಕೆಯಾಯಿತು‌ ಎಂದು ಬರೆದುಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!