ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಈಗ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಪಂಜಾಬ್ ಕ್ರಿಕೆಟ್ ಅಸೋನಿಯೇಷನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಬಯೋ ಬಬಲ್ ನಿಂದ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಈಗಾಗಲೇ ಮೊಹಾಲಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ಶುರು ಮಾಡಿದ್ದಾರೆ.
ಜನವರಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕಳಪೆ ಫಾರ್ಮ್ ನಿಂದ ಟೀಂ ಇಂಡಿಯಾದ ಬ್ಯಾಟರ್ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೀಜಾರ ಅವರನ್ನು ಈ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದೆ. ಇನ್ನು ಪಂದ್ಯದ ವೇಳೆ ಗಾಯಗೊಂಡ ಕಾರಣದಿಂದ ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಹಾಗೂ ಫಿಟ್ ನೆಸ್ ಸಮಸ್ಯೆಯಿಂದ ಶಾರ್ದೂಲ್ ಟಾಕೂರ್ ಕೂಡ ಟೆಸ್ಟ್ ಕಣದಿಂದ ದೂರ ಉಳಿಯಲಿದ್ದಾರೆ. ಭಾರತ ಎ ತಂಡದ ಉತ್ತರ ಪ್ರದೇಶದ ಸೌರಬ್ ಕುಮಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದೀಗ ರಹಾನೆ ಹಾಗೂ ಇವರಿಬ್ಬರ ಸ್ಥಾನಕ್ಕೆ ಯಾರು ಬರಬಹುದು ಎಂಬ ಕುತೂಹಲ ಎಲ್ಲರಲೂ ಇದೆ. ಇವರ ಸ್ಥಾನ ಪಡೆಯಲು ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಆಲ್ರೌಂಡ್ ಹನುಮ ವಿಹಾರಿ ನಡುವೆ ತೀವ್ರ ಪೈಪೋಟಿ ಇದೆ ಎನ್ನಲಾಗಿದೆ.