ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಖನೌ ಬೌಲಿಂಗ್ ದಾಳಿಗೆ ಎಡವಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದು, ಲಖನೌ ಗೆಲುವಿಗೆ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ಆರಂಭದಲ್ಲೇ ಸಂಕಷ್ಟ ಎದುರಿಸಿತ್ತು. ಯಶಸ್ವಿ ಜೈಸ್ವಾಲ್ 22 ರನ್ ಹಾಗೂ ಧ್ರುವ್ ಜುರೆಲ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.
ಇದರ ಬೆನ್ನಲ್ಲೇ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ ಕೇವಲ ಎಂಟು ರನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಿಯಾನ್ ಪರಾಗ್ 20 ರನ್ ಗಳಿಸಿದರೆ ಹಾಗೂ ಹೆಟ್ಮೆಯರ್ 22 ರನ್ ಗಳಿಸಿ ತಂಡದ ಮೊತ್ತವನ್ನು ಕೊಂಚ ಏರಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ರವೀಂದ್ರ ಜಡೇಜಾ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಲು ನೆರವಾದರು.ಜಡ್ಡು ಅಜೇಯ 43 ರನ್ ಗಳಿಸಿದರು.



