ಹೊಸದಿಗಂತ ವರದಿ, ವಿಜಯಪುರ:
ಗುಮ್ಮಟನಗರಿಯಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಬಿದ್ದಿವೆ.
ಬೆಳಗ್ಗೆಯಿಂದ ಬಿರು ಬಿಸಿಲಿನಿಂದ ಕೂಡಿದ ವಾತಾವರಣ, ಮಳೆಯಾಗುತ್ತಿದ್ದಂತೆ ತಂಪಾಯಿತು.
ನಗರದಲ್ಲಿ ಕೆಲ ಹೊತ್ತು ಜೋರಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ಮಳೆ ನೀರು ಮಡುಗಟ್ಟಿ ನಿಂತು, ಚರಂಡಿ, ಗಟಾರುಗಳು ತುಂಬಿ ಹರಿಯುವಂತಾಗಿದೆ. ಅಲ್ಲದೆ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಳ್ಳುವಂತಾಯಿತು.
ಜಿಲ್ಲೆಯಲ್ಲಿ ರೋಹಿಣಿ ಮಳೆ ಕೈಕೊಟ್ಟಿದ್ದಕ್ಕೆ ಆತಂಕಗೊಂಡಿದ್ದ ರೈತ ವರ್ಗ ಮುಂಗಾರು ಮೊದಲ ಮಳೆಯಾದ ಮೃಗಶಿರ ಧಾರಾಕಾರ ಸುರಿದ್ದಿದ್ದು, ಅನ್ನದಾತರಲ್ಲಿ ಸಂತಸಮೂಡುವಂತೆ ಮಾಡಿದೆ.