SOLAR ECLIPSE | ಇಂದು ಸಂಪೂರ್ಣ ಸೂರ್ಯಗ್ರಹಣ, ಏನು ಮಾಡಬೇಕು? ಏನು ಮಾಡಬಾರದು?

ಇಂದು ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ. ಈ ದಿನದಂದು ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದು, ಹಾಗು ಕೆಲವೊಂದು ಕೆಲಸಗಳನ್ನು ಮಾಡಬೇಕು ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ಸೂರ್ಯಗ್ರಹಣಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ನಾವು ತಿನ್ನುವುದನ್ನು ನಿಲ್ಲಿಸಬೇಕು ಎಂದು ಹೇಳಲಾಗುತ್ತದೆ.  ಗ್ರಹಣದ ಸಮಯದಲ್ಲಿ ಸೂರ್ಯನ ಕಲುಷಿತ ಕಿರಣಗಳು ನಾವು ಸೇವಿಸುವ ಆಹಾರದ ಮೇಲೆ ಪ್ರಭಾವ ಬೀರಬಹುದಾಗಿದೆ.

ಗ್ರಹಣ ಸಂಭವಿಸುವ ಮೊದಲು ಮಾಡಿದ ಹಳೆಯ, ಉಳಿದ ಆಹಾರವನ್ನು ಇಟ್ಟುಕೊಳ್ಳದಿರುವುದು ಉತ್ತಮ. ಗ್ರಹಣ ಮುಗಿದ ನಂತರ ತಾಜಾ ಆಹಾರವನ್ನು ತಯಾರಿಸಬೇಕು. ಈಗಾಗಲೇ ಹೆಚ್ಚು ಅಡುಗೆ ಮಾಡಿದ್ದಾಗಿದ್ದರೆ
ಗ್ರಹಣ ಆರಂಭವಾಗುವ ಮುನ್ನದರ್ಬೆ ಅಥವಾ ಗರಿಕೆಯನ್ನು ಹಾಕಿಟ್ಟು ನಂತರ ಅದನ್ನು ಸೇವಿಸಬಹುದು.

ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೇರವಾಗಿ ನೋಡಲು ಹೋಗಬಾರದು. ಅದು ಕಣ್ಣಿನ ಮೇಲೆ ಹಾನಿಯ್ನನುಂಟು ಮಾಡಬಹುದು. ಸನ್‌ಗ್ಲಾಸ್‌ಗಳನ್ನು ಧರಿಸಿ ಸೂರ್ಯನನ್ನು ನೀವು ನೋಡಬಹುದಾಗಿದೆ.

ಈ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವುದರಿಂದ ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದಷ್ಟು ಮನೆ, ಕಚೇರಿ ಒಟ್ಟಾರೆ ಇಂಡೋರ್‌ನಲ್ಲಿ ಇರುವುದು ಉತ್ತಮ ಎನ್ನಲಾಗುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ನಮ್ಮನ್ನು ನಾವು ಧ್ಯಾನ ಮಾಡುವುದರಲ್ಲಿ, ಪೂಜೆ ಮಾಡುವುದರಲ್ಲಿ ತೊಡಗಿಸಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!