ಪ್ರವಾಸಿಗರೇ ಇಲ್ಲಿ ಗಮನಿಸಿ, ಮಡಿಕೇರಿಯಲ್ಲಿ ಇನ್ಮುಂದೆ ವಾಟರ್​ ಬಾಟಲ್​ ಸಿಗೋದಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಡಿಕೇರಿಗೆ ಪ್ರವಾಸಿಗರು ಬರೋ ಸಂಖ್ಯೆಯಲ್ಲಿ ಎಂದೂ ಕಡಿಮೆಯಾಗಿಲ್ಲ. ಜನರು ದಿನವೂ ಆಗಮಿಸುತ್ತಿದ್ದು, ಪ್ಲಾಸ್ಟಿಕ್‌ ವಾಟರ್‌ ಬಾಟಲಿ ಬಳಕೆ ಮಾಡುತ್ತಾರೆ. ನಂತರ ಎಲ್ಲಿ ಬೇಕೆಂದರಲ್ಲಿ ಅದನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ಹೊಸ ರೂಲ್ಸ್‌ ಜಾರಿ ಮಾಡಲಾಗುತ್ತಿದೆ.

ಸದ್ಯ ಮಡಿಕೇರಿಯಲ್ಲಿ ಕಸ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ಸಹಸ್ರಾರು ಕೆಜಿ ಪ್ಲಾಸ್ಟಿಕ್ ಬಾಟಲಿಗಳನ್ನ ತೆಗೆದುಕೊಂಡು ಹೋಗಿ ಬೆಟ್ಟದ ಮೇಲೆ ಡಂಪ್ ಮಾಡಲಾಗುತ್ತಿದೆ. ಇದೇ ಇದೀಗ ಟನ್​ಗಟ್ಟಲೆ ಸಂಗ್ರಹವಾಗಿದೆ. ಈ ಸಮಸ್ಯೆಯಿಂದ ಮುಕ್ತವಾಗಲು ಇದೀಗ ಮಡಿಕೇರಿ ನಗರಸಭೆ ಮಡಿಕೇರಿ ನಗರದಲ್ಲಿ ಎರಡು ಲೀಟರ್​ವರೆಗಿನ ಪ್ಲಾಸ್ಟಿಕ ವಾಟರ್ ಬಾಟಲಿಗಳ ಮಾರಾಟವನ್ನ ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ನಗರದ ವರ್ತಕರು, ಹೋಮ್ ಸ್ಟೇ ರೆಸಾರ್ಟ್​ ಮಾಲೀಕರು ಹಾಗೂ ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಮೀಟಿಂಗ್ ಮಾಡಿದ್ದು, ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಮಾಡದಂತೆ ಮನವೊಲಿಕೆ ಮಾಡಿದೆ. ಮಡಿಕೇರಿ ನಗರದಲ್ಲಿ ಈಗಾಗಲೇ ಮೂರು ಕಡೆ ಜಲ ಶುದ್ಧೀಕರಣ ಘಟಕ ಇದ್ದು ಅಲ್ಲಿ 1 ರೂ. ಹಾಗೂ 5 ರೂ. ನಾಣ್ಯ ಹಾಕಿದರೆ ಬೇಕಾದಷ್ಟು ಕುಡಿಯುವ ನೀರು ದೊರಯುತ್ತದೆ. ಅದರ ಜೊತೆಗೆ ನಗರದ ಹಲವು ಕಡೆ ವಾಟರ್ ಫಿಲ್ಟರ್​ಗಳನ್ನೂ ಅಳವಡಿಸಲು ಕೂಡ ಯೋಜನೆ ಸಿದ್ಧವಾಗಿದೆ. ನಗರದಲ್ಲಿ ಕಸದ ಹೊರೆ ತಗ್ಗಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ.

ಸದ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗಿದೆಯಾದರೂ ಕಟ್ಟುನಿಟ್ಟಾಗಿ ಜಾರಿಗೆ ತರುವ ಅವಶ್ಯಕತೆ ಇದೆ. ಈಗಾಗಲೆ ಅಂಗಡಿ ಮುಂಗಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರಿನ ಬಾಟಲಿಗಳ ಸಂಗ್ರಹಗವಿದ್ದು ಅವುಗಳ ಮಾರಾಟಕ್ಕೆ ಅವಕಾಶ ನಿಡಲಾಗಿದೆ. ಆದರೆ, ಹೊಸ ಬಾಟಲಿಗಳ ಖರೀದಿ ಮಾಡದಂತೆ ಸೂಚಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!