ಭಾರೀ ಮಳೆ: ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿಷೇಧ

ಹೊಸದಿಗಂತ ವರದಿ ಯಲ್ಲಾಪುರ:

ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ನೀರು ರಭಸದಿಂದ ಹರಿಯುತ್ತಿದ್ದು, ಪ್ರವಾಸಿಗರು ನೀರಿಗಿಳಿಯುವ ಸಾಹಸಕ್ಕೆ ಕೈ ಹಾಕುತ್ತಾರೆ.

ಅಲ್ಲದೇ ಜಲಪಾತಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ಗುಡ್ಡ ಕುಸಿಯುವ ಭೀತಿಯಿಂದಾಗಿ ಹಾಗೂ ಜಲಪಾತಕ್ಕೆ ಹೋಗುವ ರಸ್ತೆ ಬದಿಯ ಮರಗಳು ಉರುಳಿ ಬೀಳುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಪ್ರವಾಸಿಗರು ಬರದಂತೆ ನಿರ್ಬಂಧಿಸಲಾಗಿದೆ. ಈ ಕುರಿತು ಕುಂಬ್ರಾಳ ಕಂಚನಗದ್ದೆ ಗ್ರಾಮ ಅರಣ್ಯ ಸಮಿತಿ ಆದೇಶಿಸಿರುವುದಾಗಿ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here