ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಕಿ ಭಾಯ್’ ಯಶ್ ಹೊಸ ಸಿನಿಮಾ ಅಂದ್ರೆ ಥಿಯೇಟರ್ ಮುಂದೆ ಹಬ್ಬದ ವಾತಾವರಣ ಇರಲೇಬೇಕು. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬರೋಬ್ಬರಿ 112 ಕೋಟಿ ರೂಪಾಯಿ ಬಾಚಿಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ ಎಬ್ಬಿಸಿತ್ತು. ಆದ್ರೆ, ಆ ಆವೇಗ ಹೆಚ್ಚಾಗೇನು ಉಳಿಲಿಲ್ಲ. ಮೊದಲ ವಾರ ಮುಗಿಯೋಷ್ಟರಲ್ಲಿ ಕಲೆಕ್ಷನ್ ಪೂರ್ತಿ ಡೌನ್ ಆಗಿದೆ.

ವರದಿಯ ಪ್ರಕಾರ, ಮೊದಲ ವಾರದ ಕೊನೆ ದಿನ ಈ ಸಿನಿಮಾ ಗಳಿಸಿದ್ದು ಬರೀ 4.50 ಕೋಟಿ ರೂಪಾಯಿ ಮಾತ್ರ. ಅಲ್ಲಿಗೆ ಇಂಡಿಯಾದಲ್ಲಿ ಇದುವರೆಗೆ ಒಟ್ಟು 257 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇನ್ನು ವಿದೇಶದಲ್ಲೂ ಈ ಚಿತ್ರಕ್ಕೆ ಸುಮಾರು 40 ಕೋಟಿ ರೂಪಾಯಿ ಹರಿದು ಬಂದಿದ್ದು, ವರ್ಲ್ಡ್ ವೈಡ್ ಕಲೆಕ್ಷನ್ 297 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇನ್ನು ಒಂದೆರಡು ದಿನದಲ್ಲಿ 300 ಕೋಟಿ ಕ್ಲಬ್ ಸೇರೋದು ಖಚಿತ, ಆದ್ರೆ ಕಥೆ ಇಲ್ಲೇ ಮುಗಿಯಲ್ಲ.
ಮೊದಲ ದಿನ ಗ್ರ್ಯಾಂಡ್ ಎಂಟ್ರಿ, ಆಮೇಲೆ ಸೈಲೆಂಟ್!
ಮೊದಲ ದಿನ ಬಂದ ಆಡಿಯನ್ಸ್ ರಿಯಾಕ್ಷನ್ ಮತ್ತು ‘ವರ್ಡ್ ಆಫ್ ಮೌತ್’ ಸಿನಿಮಾ ಗ್ರೋತ್‌ಗೆ ಸಪೋರ್ಟ್ ಮಾಡ್ಲಿಲ್ಲ. ವೀಕೆಂಡ್ ಬರೋಷ್ಟರಲ್ಲಿ ಕಲೆಕ್ಷನ್ 20 ಶೇಕಡಾಕ್ಕಿಂತ ಕೆಳಗೆ ಬಿತ್ತು. ಇನ್ನು ವಾರದ ಕೊನೆಯ ದಿನ ನೋಡಿದ್ರೆ, ಫಸ್ಟ್ ಡೇ ಬಂದ ಕಲೆಕ್ಷನ್‌ಗೆ ಹೋಲಿಸಿದ್ರೆ ಬರೀ 5 ಶೇಕಡಾ ಮಾತ್ರ ಆಡಿಯನ್ಸ್ ಬಂದಿದ್ದಾರೆ. ಅಂದ್ರೆ ಮೊದಲ ದಿನ ಇದ್ದ ಕ್ರೇಜ್ ಆಮೇಲೆ ಕಂಪ್ಲೀಟ್ ಮಾಯವಾಯ್ತು.

ಹಿಂದಿಯಲ್ಲಿ ಕಲೆಕ್ಷನ್, ಸೌತ್‌ನಲ್ಲಿ ಒನ್ ಡೇ ಶೋ!
ವಿಶೇಷ ಅಂದ್ರೆ, ಈ ಸಿನಿಮಾಗೆ ಬಂದ ಒಟ್ಟು ಕಲೆಕ್ಷನ್‌ನಲ್ಲಿ ಜಾಸ್ತಿ ಶೇರ್ ಬಂದಿರೋದು ಹಿಂದಿ ವರ್ಷನ್‌ನಿಂದ. ಹಿಂದಿಯಲ್ಲಿ ಸುಮಾರು 128 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಆದ್ರೆ ಸೌತ್ ಸ್ಟೇಟ್ಸ್‌ನಲ್ಲಿ ಮಾತ್ರ ಕಥೆ ಪೂರ್ತಿ ಉಲ್ಟಾ. ಮೊದಲ ದಿನದ ನಂತರ ಕಲೆಕ್ಷನ್ ಸಡನ್ ಆಗಿ ಕ್ರ್ಯಾಶ್ ಆಯ್ತು. ನಮ್ಮ ಕರ್ನಾಟಕದಲ್ಲಿ ಒಂದಷ್ಟು ಮಟ್ಟಿಗೆ ಟಿಕೆಟ್ಸ್ ಸೇಲ್ ಆಗಿದ್ದು ಬಿಟ್ರೆ, ಮಿಕ್ಕ ಸೌತ್ ರಾಜ್ಯಗಳಲ್ಲಿ ಸಿನಿಮಾ ಗಟ್ಟಿಯಾಗಿ ನಿಲ್ಲಲೇ ಇಲ್ಲ.

ಕಲೆಕ್ಷನ್ ಓಕೆ, ಆದ್ರೆ ಲಾಸ್?
297 ಕೋಟಿ ರೂಪಾಯಿ ಕಲೆಕ್ಷನ್ ಅಂದ್ರೆ ಸಣ್ಣ ವಿಷಯವಲ್ಲ, ಆದ್ರೆ ಸಿನಿಮಾದ ಬಜೆಟ್ ಮತ್ತು ಅದಕ್ಕೆ ಆದ ಖರ್ಚುಗಳು ಸಿಕ್ಕಾಪಟ್ಟೆ ಇವೆ. ಇದರ ಜೊತೆಗೆ, ಥಿಯೇಟರ್ ಹೊರತಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ನಿರೀಕ್ಷಿಸಿದಷ್ಟು ಬ್ಯುಸಿನೆಸ್ ಮಾಡಿಲ್ಲ. ಹೀಗಾಗಿ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತ ಬಂದಿದ್ದರೂ, ಫೈನಾನ್ಷಿಯಲ್ ಆಗಿ ನಿರ್ಮಾಪಕರಿಗೆ ಇದು ಭಾರಿ ದೊಡ್ಡ ನಷ್ಟವನ್ನೇ ತಂದಿಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನಷ್ಟ ಅನುಭವಿಸಿದ ಸಿನಿಮಾಗಳ ಸಾಲಿಗೆ ‘ಟಾಕ್ಸಿಕ್’ ಸೇರುವುದು ಬಹುತೇಕ ಖಚಿತವಾಗಿದೆ.



