August 25, 2026
Tuesday, August 25, 2026
spot_img

ಚೆನ್ನೈನಲ್ಲಿ ಟಾಕ್ಸಿಕ್‌ ಪ್ರೀ ರಿಲೀಸ್‌ ಈವೆಂಟ್‌ : ಯಶ್‌ ಹವಾ ಮೀರಿಸಿದ ನಟಿ ರುಕ್ಮಿಣಿ ವಸಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೀತುಮೋಹನ್‌ದಾಸ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಟಾಕ್ಸಿಕ್‌ ನಾಳೆ ಅದ್ಧೂರಿಯಾಗಿ ತೆರೆಕಾಣಲಿದೆ. ಟಾಕ್ಸಿಕ್‌ ಸಿನಿಮಾದಷ್ಟೇ ಅದ್ಧೂರಿಯಾಗಿ ಪ್ರಮೋಷನ್ಸ್‌ ನಡೆದಿದ್ದು, ಚೆನ್ನೈನಲ್ಲಿ ನಡೆದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ನಟಿ ರುಕ್ಮಿಣಿ ವಸಂತ್‌ ನೋಡೋದಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು.

ಬೇರೆ ಕಡೆಗಳಲ್ಲಿ ನಡೆದ ಟಾಕ್ಸಿಕ್‌ ಈವೆಂಟ್ಸ್‌ಗಳಲ್ಲಿ ಯಶ್‌ ಸ್ಟೇಜ್‌ ಮೇಲೆ ಮಾತನಾಡೋಕೆ ಬಂದ ತಕ್ಷಣ ಜನ ಕೂಗಿ ಚಿಯರ್‌ ಮಾಡೋದಕ್ಕೆ ಆರಂಭಿಸುತ್ತಿದ್ದರು. ಯಶ್‌ ಮಾತನಾಡೋಕೆ ಬಿಡದೇ ತಮ್ಮ ಪ್ರೀತಿಯನ್ನು ತೋರಿಸಿದ್ದರು. ಆದರೆ ಚೆನ್ನೈನಲ್ಲಿ ನಡೆದ ಈವೆಂಟ್‌ನಲ್ಲಿ ಮಾತ್ರ ಯಶ್‌ ಜಾಗವನ್ನು ನಟಿ ರುಕ್ಮಿಣಿ ವಸಂತ್‌ ಪಡೆದುಕೊಂಡಿದ್ದಾರೆ. ರುಕ್ಕು ಸ್ಟೇಜ್‌ ಮೇಲೆ ಬಂದು ವಣಕಂ ಎಂದು ಹೇಳಿದ ತಕ್ಷಣವೇ ಜನ ಜೋರಾಗಿ ಕೂಗಿ ಚಿಯರ್‌ ಮಾಡೋಕೆ ಆರಂಭಿಸಿದ್ದಾರೆ.

https://www.instagram.com/reel/Dcbq-IDuP7W/?igsi=MW1wZnFianl1cHowaA%3D%3D

ಇದಾದ ಐದು ನಿಮಿಷಗಳ ಕಾಲ ರುಕ್ಮಿಣಿ ನನಗೆ ಮಾತನಾಡೋಕೆ ಬಿಡಿ ಎಂದು ಕೇಳಿಕೊಂಡರೂ ಜನ ನೋ ಎಂದಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿರುವ ಫ್ಯಾನ್ಸ್‌ ಚಿಯರ್‌ ಮಾಡಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ನಿರೀಕ್ಷಿಸದ ರುಕ್ಮಿಣಿ ಕೂಡ ಶಾಕ್‌ನಲ್ಲಿ ಇಷ್ಟೊಂದು ಪ್ರೀತಿ ಕೊಡ್ತಿದ್ದಾರಾ ಎಂದು ನೋಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಜನ ನಮ್ಮ ಕನ್ನಡದ ಹುಡುಗಿಯನ್ನು ನೋಡಿ ಹೆಮ್ಮೆಪಟ್ಟಿದ್ದಾರೆ.

ಸಿನಿಮಾ ನಿರ್ದೇಶಕಿ ಗೀತುಮೋಹನ್‌ದಾಸ್‌ ಹಾಗೂ ನಟ ಯಶ್‌ ಕೂಡ ಮೊದಲ ಸಾಲಿನಲ್ಲೇ ಕುಳಿತಿದ್ದು, ರುಕ್ಮಿಣಿಗೆ ಜನ ಕೊಡುತ್ತಿರುವ ಪ್ರೀತಿ ನೋಡಿ ಖುಷಿಪಟ್ಟಿದ್ದಾರೆ. ಜನರ ಜೊತೆ ಸೇರಿ ಅವರೂ ಚಪ್ಪಾಳೆ ಹೊಡೆದು ಹುರಿದುಂಬಿಸಿದ್ದಾರೆ.



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !