ಜಲಜನಕದ ಕಾರು: ಟೊಯೊಟಾ ಉತ್ಸಾಹಕ್ಕೆ ಸಚಿವ ಗಡ್ಕರಿ ಚಿಯರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಗ್ರೀನ್ ಹೈಡ್ರೋಜನ್ ಆಧರಿಸಿ ಚಲಿಸುವ ಕಾರು ಎಂಬುದು ಭಾರತ ಬಹು ಆಯಾಮಗಳಲ್ಲಿ ಸಾಕಾರಕ್ಕೆ ಹೆಣಗುತ್ತಿರುವ ಕನಸು. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಬಳಕೆಗೆ ಬರಬಹುದಾದ ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ ಹಾಗೂ ವಾಹನಗಳು ಇನ್ನೂ ಬಳಕೆಗೆ ಬಂದಿಲ್ಲ.

ಬುಧವಾರ ಟೊಯೊಟಾ ಕಂಪನಿ ಮಿರೈ ಎಂಬ ಗ್ರೀನ್ ಹೈಡ್ರೋಜನ್ ಇಂಧನ ಕೋಶ ಹೊಂದಿರುವ ಕಾರಿನ ಪ್ರಾಯೋಗಿಕ ಮಾದರಿಯನ್ನು ಅನಾವರಣಗೊಳಿಸಿತು. ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

“ಟೊಯೊಟಾದ ಈ ವಾಹನ ಜಿರೋ ವಿಸರ್ಜನೆಯ ಮಾದರಿಯಾಗಿದೆ. ಇದರಲ್ಲಿ ನೀರು ಹೊರತುಪಡಿಸಿದರೆ ಮತ್ಯಾವುದೂ ಹೊರಬರುವುದಿಲ್ಲ. ಹೀಗಾಗಿ ಇದು ಸಂಪೂರ್ಣ ಪರಿಸರಸ್ನೇಹಿ” ಎಂದು ಗಡ್ಕರಿ ಸಮಾರಂಭದಲ್ಲಿ ಹೇಳಿದರು.

ಟೊಯೊಟಾದ ಮಿರೈ ಭಾರತದ ಎಲ್ಲ ರಸ್ತೆಗಳು ಹಾಗೂ ಹವಾಮಾನ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಬಲ್ಲುದೇ ಎಂಬುದನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ.

ಅಂದಹಾಗೆ, ಇಲ್ಲಿನ ಪರಿಕಲ್ಪನೆ ಹೀಗಿದೆ. ಎಚ್2ಒ ಅಂದರೆ ಜಲಜನಕದ ಎರಡು ಅಣು ಮತ್ತು ಆಮ್ಲಜನಕದ ಒಂದು ಅಣು ಸೇರಿಕೊಂಡು ನೀರು ಆಗಿದೆ ಎಂದು ನಾವೆಲ್ಲ ಓದಿಕೊಂಡು ಬಂದಿದ್ದೇವೆ. ಇದರಲ್ಲಿನ ಹೈಡ್ರೋಜನ್ ಅನ್ನು ಮಾತ್ರವೇ ವಿಭಜಿಸಿ ಅದನ್ನು ಇಂಧನವಾಗಿಸಿಕೊಳ್ಳುವ ತಂತ್ರಜ್ಞಾನದ ಪ್ರಯಾಸವಿದು. ಈ ವಿದ್ಯುದ್ವಿಭಜನೆ ಪ್ರಕ್ರಿಯೆಗೆ ಕಲ್ಲಿದ್ದಲು, ಡಿಸೆಲ್ ಇತ್ಯಾದಿಗಳನ್ನು ಬಳಸದೇ ನವೀಕೃತ ಮೂಲ ಬಳಸಿದರೆ ಅದು ಗ್ರೀನ್ ಹೈಡ್ರೋಜನ್ ಎನಿಸಿಕೊಳ್ಳುತ್ತದೆ. ಏಕೆಂದರೆ ಅಲ್ಲಿ ಮಾಲಿನ್ಯ ಪ್ರಮಾಣ ಜೀರೋ ಎಂಬ ಕಾರಣಕ್ಕೆ. ಮೂರೂ ಕಡೆ ನೀರಿನಿಂದಲೇ ಸುತ್ತುವರಿದಿರುವ ಭಾರತ ಈ ತಂತ್ರಜ್ಞಾನದ ಮೇಲೆ ಭಾರಿ ವಿಶ್ವಾಸ ಇರಿಸಿಕೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!