ಮಾರೋದು ‘ಗೋಲ್ಡನ್ ಕುಲ್ಫಿ’: ಅವನ ಮೈ ತುಂಬಾ ಚಿನ್ನ, ಇಂದೋರ್‌ನಲ್ಲೊಬ್ಬ ಶ್ರೀಮಂತ ವ್ಯಾಪಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ಯಮಿಗಳು ಜನರನ್ನು ಮೆಚ್ಚಿಸಲು ಹೊಸ ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ. ವ್ಯಾಪಾರಿಯೊಬ್ಬರು ಚಿನ್ನದ ಹಾಳೆಯಲ್ಲಿ ಕುಲ್ಫಿ ಸುತ್ತಿ ಮಾರುತ್ತಾರೆ. ಇಂದೋರ್‌ನ ಆ ಬೀದಿ ವ್ಯಾಪಾರಿ ಮೈ ತುಂಬಾ ಚಿನ್ನ ಧರಿಸಿದ್ದರೂ ಈ ಕುಲ್ಫಿ ವ್ಯಾಪಾರ ಮಾಡುತ್ತಿದ್ದಾನೆ.

ಕೆಲವು ಬಗೆಯ ಆಹಾರ ಪದಾರ್ಥಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಅವರಲ್ಲಿ ಹೆಚ್ಚಿನವರು ತಮ್ಮ ಅಂಗಡಿಗಳಿಗೆ ಜನರನ್ನು ಆಕರ್ಷಿಸಲು ಹೆಚ್ಚು ಜಾಹೀರಾತು ನೀಡುತ್ತಾರೆ. ಅದರಂತೆ ಇದೂ ಒಂದು. ಎಲ್ಲರಿಗೂ ಕುಲ್ಫಿ ಎಂದರೆ ಇಷ್ಟ.. ಪಿಸ್ತಾ, ಬಾದಾಮ್‌, ಮ್ಯಾಂಗೋ ಹೀಗೆ ಕೆಲವು ವೆರೈಟಿಗಳೊಂದಿಗೆ ಕುಲ್ಫಿಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ.

ಅದರಲ್ಲಿ ಗೋಲ್ಡನ್ ಕುಲ್ಫಿ ಕೇಳಿದ್ದೀರಾ? ಇಂದೋರ್‌ನಲ್ಲಿ ವ್ಯಾಪಾರಿಯೊಬ್ಬರು ಗೋಲ್ಡನ್ ಕುಲ್ಫಿ ಮಾರಾಟ ಮಾಡುತ್ತಿರುವ ವೀಡಿಯೊವನ್ನು ಆಹಾರ ಬ್ಲಾಗರ್ ಕಲಾಶ್ ಸೋನಿ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಉದ್ಯಮಿ ಸಂಪೂರ್ಣ ಚಿನ್ನಾಭರಣ ಧರಿಸಿದ್ದಾರೆ. ಫ್ರಿಡ್ಜ್‌ನಿಂದ ಕುಲ್ಫಿಯ ತುಂಡನ್ನು ಹೊರತೆಗೆದು ’24 ಕ್ಯಾರೆಟ್ ಚಿನ್ನದ ಎಲೆ’ಯಲ್ಲಿ ಸುತ್ತಿ ವ್ಯಾಪಾರ ಮಾಡುತ್ತಿದ್ದಾರೆ.

ವ್ಯಾಪಾರವನ್ನು ಹೆಚ್ಚಿಸುವ ಅವರ ಆಲೋಚನೆ ಒಳ್ಳೆಯದೇ ಆದರೆ ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳ ಬಗ್ಗೆ ಆಹಾರ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

https://www.instagram.com/reel/CrBQwQDLljj/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!