Thursday, February 29, 2024

ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧ

ಹೊಸ ದಿಗಂತ ವರದಿ, ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ-ಅನಮೋಡ ನಡುವಿನ (ತಿನ್ನೇಘಾಟ) ಪ್ರದೇಶದಲ್ಲಿ ನೈರುತ್ಯ ರೇಲ್ವೆ ವತಿಯಿಂದ ರೇಲ್ವೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ಕೈಗೊಳ್ಳುವುದು ಅವಶ್ಯವಾಗಿರುವುದರಿಂದ ಜನವರಿ 5ರಿಂದ 25ರವರೆಗೆ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ, ಅನುಮೋಡನಿಂದ ರಾಮನಗರ (ದಾಂಡೇಲಿ) ಕಡೆಗೆ ಹೋಗುವ ಲಘು ವಾಹನಗಳಿಗೆ ಅನುಮೋಡ-ಕ್ಯಾಸರಲಾಕ್ ಕ್ರಾಸ್-ಕ್ಯಾಸರಲಾಕ್-ಕುಣಗಿನಿ ಚೆಕ್‌ಪೋಸ್ಟ್- ಚಾಂದೇವಾಡಿ-ಜಗಲಬೇಟ್ ಮಾರ್ಗವಾಗಿ ಏಕಮುಖ ಸಂಚಾರ, ರಾಮನಗರದಿಂದ ಅನುಮೋಡ ಹೊಗುವ ಲಘು ವಾಹನಗಳಿಗೆ ರಾಮನಗರ-ತಿನ್ನೇಘಾಟ-ಮಾರ್ಸಂಗಳ್  ಕ್ರಾಸ್-ಹೆಮ್ಮಡಗಾ ರೊಡ್- ಅನುಮೋಡ್ ಮಾರ್ಗವಾಗಿ ಏಕಮುಖ ಸಂಚಾರ ಹಾಗೂ ಮಧ್ಯಮ ಮತ್ತು ಭಾರಿ ವಾಹನಗಳಿಗೆ ಆಳ್ನಾವರ-ಹಳಿಯಾಳ-ಯಲ್ಲಾಪುರ-ಕಾರವಾರ- ಗೋವಾ ಮಾರ್ಗದ ಮೂಲಕ ಸಂಚರಿಸುವಂತೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!