ಹೊಸದಿಗಂತ ವರದಿ,ಬಳ್ಳಾರಿ:
ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೌಲ್ ಬಜಾರ್ ಠಾಣೆ ಪೊಲೀಸ್ ಅದಿಕಾರಿಗಳು 8 ಜನರನ್ನು ಬಂಧಿಸಿದ್ದು, 550 ಗ್ರಾಂ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಪುರುಷೋತ್ತಮ, ವಿಜಯ ಕುಮಾರ್, ಮಹೇಶ್, ತಿರುಮಲ, ಧನಂಜಯ್, ಕೆ.ಮಹೇಶ್, ಚಂದ್ರಶೇಖರ್, ವಿನಯ್ ಬಂಧಿತರು. ನಗರದ ಇನ್ ಫ್ರಂಟ್ ರಿ ರಸ್ರೆಯ ಖಾಲಿ ಸ್ಥಳದಲ್ಲಿ ಪೊಲೀಸರು ಎಂಟು ಜನ ಆದರೆ ಆರೋಪಿ ಗಳನ್ನು ಬಂಧಿಸಿ
550 ಗ್ರಾಂ.ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ. ಬಳ್ಳಾರಿ ನಗರ ಡಿವೈಎಸ್ಪಿ ಅವರ ನೇತೃತ್ವದ ತಂಡದಲ್ಲಿ ನಗರ ಡಿವೈಎಸ್ಪಿ ರಮೇಶ್ ಕುಮಾರ್, ಕೌಲ್ ಬಜಾರ್ ಪಿಐ ಸುಭಾಷ್ ಚಂದ್ರ, ಎಚ್.ಸಿ.ಗಳಾದ ನಾಗರಾಜ್, ಅನ್ವರ್, ಸೋಮಪ್ಪ, ವೀರೇಶ್ , ರಾಮ್ ದಾಸ್, ಪಿಸಿ ಗಳಾದ ಶಿವಕುಮಾರ್, ಸಂತೋಷ್ ಅವರಿದ್ದು, ಎಲ್ಲ ಅಧಿಕಾರಿಗಳ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.