July 21, 2026
Tuesday, July 21, 2026
spot_img

ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ದುರಂತ: ರಷ್ಯಾ ದಾಳಿಯಲ್ಲಿ ಕೇರಳದ ಯುವ ನಾವಿಕ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನ ಒಡೆಸಾ ಕರಾವಳಿ ಸಮೀಪ ಸರಕು ಹಡಗಿನ ಮೇಲೆ ನಡೆದ ರಷ್ಯಾ ದಾಳಿಯಲ್ಲಿ ಭಾರತೀಯ ನಾವಿಕನೊಬ್ಬ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಮೃತರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ 26 ವರ್ಷದ ಅಖಿಲ್ ಜೋಯನ್ ಕೂಡ ಸೇರಿದ್ದಾರೆ.

ಮದುವೆಗೆ ಸಿದ್ಧವಾಗಿದ್ದ ಯುವಕ

ಕಳೆದ ಆರು ವರ್ಷಗಳಿಂದ ಸರಕು ಹಡಗಿನಲ್ಲಿ ನಾವಿಕನಾಗಿ ಕೆಲಸ ಮಾಡುತ್ತಿದ್ದ ಅಖಿಲ್ ಜೋಯನ್ ಇನ್ನೆರಡು ತಿಂಗಳಲ್ಲಿ ವಿವಾಹವಾಗಬೇಕಿತ್ತು. ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿ ಮತ್ತೆ ಕೆಲಸಕ್ಕೆ ಮರಳಿದ್ದರು.

ಕುಟುಂಬಕ್ಕೆ ಇಮೇಲ್ ಮೂಲಕ ಮಾಹಿತಿ

ಸೋಮವಾರ ಸಂಜೆ ಅವರು ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಬಂದ ಇಮೇಲ್ ಮೂಲಕ ಕುಟುಂಬಕ್ಕೆ ಸಾವಿನ ಸುದ್ದಿ ತಲುಪಿದೆ. ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ:

ಸರ್ಕಾರದಿಂದ ನೆರವಿನ ಭರವಸೆ

ಕೇರಳ ಸರ್ಕಾರ ಈ ಸಂಬಂಧ ಎನ್‌ಒಆರ್‌ಕೆಎ, ವಿದೇಶಾಂಗ ಸಚಿವಾಲಯ ಹಾಗೂ ರಷ್ಯಾ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.

ದಾಳಿಯಲ್ಲಿ ಹಲವು ಸಾವು

ವಿದೇಶಿ ಮಾಧ್ಯಮಗಳ ವರದಿ ಪ್ರಕಾರ, ಉಕ್ರೇನ್‌ನಿಂದ ಹೊರಟಿದ್ದ ಗಿನಿಯಾ-ಬಿಸ್ಸಾವ್ ಧ್ವಜದ ಸರಕು ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದ್ದು, ಒಟ್ಟು 10 ಸಿಬ್ಬಂದಿ ಮೃತಪಟ್ಟಿದ್ದಾರೆ. ಎಂಟು ಮಂದಿಯನ್ನು ರಕ್ಷಿಸಲಾಗಿದ್ದು, ಹಡಗು ಉಕ್ರೇನ್‌ ಗೆ ಜೋಳವನ್ನು ಸಾಗಿಸುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !