October 9, 2026
Friday, October 9, 2026
spot_img

ಕಾರವಾರದಲ್ಲಿ ಘೋರ ದುರಂತ: ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ಜಲಸಮಾಧಿ

ಹೊಸದಿಗಂತ ವರದಿ ಕಾರವಾರ:

ಕೆರೆಯಲ್ಲಿ ಈಜಾಡಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ವಾಲ್ಗಳ್ಳಿಯಲ್ಲಿ ಸಂಭವಿಸಿದೆ.

ಪ್ರಶಾಂತ ಮುಕ್ರಿ(19) ಮೃತ ದುರ್ದೈವಿಯಾಗಿದ್ದು, ನಾಲ್ಕೈದು ಜನರೊಂದಿಗೆ ಸೇರಿ ಜಡ್ಡಿಕೆರೆಯಲ್ಲಿ ಈಜಾಡಲು ತೆರಳಿದ್ದ ಈತ ತುಂಬಿದ ಕೆರೆಯಲ್ಲಿ ಮುಳುಗಿ ನೀರಿನಲ್ಲಿ ಕಣ್ಮರೆಯಾಗಿದ್ದು, ಕೆರೆಯಲ್ಲಿ ಹೂಳು ತುಂಬಿದ್ದರಿಂದ ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕುಮಟಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ.

ಇದನ್ನೂ ಓದಿ:

ಮೃತದೇಹ ಶೋಧ ಕಾರ್ಯಾಚರಣೆಗೆ ವಿಳಂಬವಾದ ಕಾರಣ ಕೆಲಕಾಲ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

Must Read