ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿಯಲ್ಲಿ ತಾತ ಸೇರಿ ಇಬ್ಬರು ಮೊಮ್ಮಕ್ಕಳು ಜಲಸಮಾಧಿ ಆಗಿರುವಂತಹ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ತಾತ ಚೌಡಯ್ಯ(70), ಮೊಮ್ಮಕ್ಕಳಾದ ಭರತ್(13) ಮತ್ತು ಧನುಷ್(10) ಮೃತಪಟ್ಟಿದ್ದಾರೆ. ನದಿ ನೀರಿನಲ್ಲಿ ಮುಳುಗುತ್ತಿದ್ದ ಮೊಮ್ಮಕ್ಕಳ ರಕ್ಷಣೆಗೆ ತಾತ ಚೌಡಯ್ಯ ಇಳಿದಿದ್ದಾರೆ. ರಕ್ಷಿಸಲಾಗದೆ ಚೌಡಯ್ಯ ಕೂಡ ನೀರುಪಾಲಾಗಿದ್ದಾರೆ.
ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದ್ದು, ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.