ಟ್ರೇಲರ್‌ ರಿಲೀಸ್:‌ ʼಅಸ್ತ್ರಾವರ್ಸ್‌ʼಗೆ ಕೊಂಡೊಯ್ಯುವ ʼಬ್ರಹ್ಮಾಸ್ತ್ರʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿಗಷ್ಟೇ ಮದುವೆಯಾಗಿರೋ ರಣಬೀರ್‌ – ಆಲಿಯಾ ಅಭಿನಯದಲ್ಲಿ ಮೂಡಿಬರುತ್ತಿರೋ ʼಬ್ರಹ್ಮಾಸ್ತ್ರʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಅಧ್ಭುತ ವಿಎಫ್‌ಎಕ್ಸ್‌ ನೋಡುಗರನ್ನು ಅಸ್ತ್ರಗಳ ಹೊಸ ಜಗತ್ತಿಗೆ ಕೊಂಡೊಯ್ಯುತ್ತದೆ.

ಮೂರು ನಿಮಿಷಗಳ ಈ ಟ್ರೇಲರ್‌ನಲ್ಲಿ ನೀರು, ಗಾಳಿ, ಬೆಂಕಿ ಹೀಗೆ ಪಂಚಭೂತಗಳು ಅಸ್ತ್ರಗಳಾಗಿ ಬಳಕೆಯಾಗುತ್ತಿರುವ ಕುರಿತು ಹೇಳಲಾಗಿದೆ. ಅಲ್ಲದೇ ಈ ಎಲ್ಲ ಅಸ್ತ್ರಗಳ ಮಾಹಾಶಕ್ತಿಯಾಗಿ ʼಬ್ರಹ್ಮಾಸ್ತ್ರʼವನ್ನು ತೋರಿಸಲಾಗಿದೆ. ಈ ಎಲ್ಲಾ ಅಸ್ತ್ರಗಳಿಗೂ ಒಬ್ಬೊಬ್ಬ ರಕ್ಷಕರನ್ನು ನೀಡಲಾಗಿದ್ದು ಇವರೆಲ್ಲರೂ ದುಷ್ಟ ಶಕ್ತಿಯಿಂದ ಬ್ರಹ್ಮಾಂಡವನ್ನು ರಕ್ಷಿಸುವುದು ಕಥೆಯ ಒನ್‌ ಲೈನರ್.‌

ಆದರೆ ತನಗಿರುವ ಶಕ್ತಿಗಳ ಬಗ್ಗೆ ಏನೂ ಅರಿವಿಲ್ಲದ ಶಿವ (ರಣಬೀರ್‌ ಕಪೂರ್)‌ ತನ್ನಂತೇ ಶಕ್ತಿಗಳ ಹೊಂದಿರುವ ಇತರರನ್ನು ಭೇಟಿ ಮಾಡುತ್ತಾನೆ. ಅಮಿತಾಭ್‌, ನಾಗಾರ್ಜುನ ಇವರೆಲ್ಲ ಇತರ ಶಕ್ತಿಯ ರಕ್ಷಕರಾಗಿದ್ದಾರೆ. ಅವರಲ್ಲಿ ಅಮಿತಾಭ್‌ ಶಕ್ತಿಯನ್ನು ಬಳಸುವ ಕುರಿತು ರಣಬೀರ್‌ ಗೆ ತರಬೇತಿ ನೀಡುವ ಮಾಸ್ಟರ್‌ ಆಗಿ ಅವರನ್ನು ತೋರಿಸಲಾಗಿದೆ. ಇನ್ನು ಶಿವನ ಗೆಳತಿಯಾಗಿ ಹಿರೋಯಿನ್‌ ಪಾತ್ರದಲ್ಲಿ ʼಇಶಾʼ ಆಗಿರುವ ಆಲಿಯಾ ಭಟ್ ಪಾತ್ರಕ್ಕೂ ಸೂಪರ್‌ ಪವರ್‌ ಗಳಿವೆಯಾ ಎಂಬುದು ಟಟ್ರೇಲರ್‌ ನಲ್ಲಿ ಸ್ಪಷ್ಟವಾಗಿಲ್ಲ. ಆದರೆ ಶಿವನ ಶಕ್ತಿ ಕಂಡುಕೊಳ್ಳುವ ಪಯಣದಲ್ಲಿ ಅವಳಿಗೊಂದು ಮುಖ್ಯ ಪಾತ್ರವಿದೆ ಎಂಬುದು ಸಾಬೀತಾಗಿದೆ. ಇನ್ನು ಮಾರ್ವೆಲ್‌ನ ವಾಂಡಾ ವಿಷನ್‌ ಪಾತ್ರ ಹೋಲುವ ವಿಲನ್‌ ಆಗಿ ಬೆಂಗಾಲಿ ಬೆಡಗಿ ʼಮೌನಿ ರಾಯ್‌ʼ ಕಾಣಿಕೊಂಡಿದ್ದಾರೆ. ಇನ್ನೊಬ್ಬ ಸೂಪರ್‌ ವಿಲನ್ ಚಿತ್ರದಲ್ಲಿದ್ದು ಮುಖವನ್ನು ಸ್ಪಷ್ಟವಾಗಿ ರಿವೀಲ್‌ ಮಾಡಿಲ್ಲ.

ಇದು ಈ ಚಿತ್ರ ಸರಣಿಯ ಒಂದನೇ ಭಾಗವಾಗಿದ್ದು ಶಿವನ ಶಕ್ತಿಯ ಹುಡುಕಾಟ ಮತ್ತು ಆತ ತನ್ನ ಶಕ್ತಿಯ ಬಳಕೆಯಬಗ್ಗೆ ಕಂಡುಕೊಳ್ಳುವ ಕುರಿತು ಇರಲಿದೆ ಎಂದು ಊಹಿಸಲಾಗಿದೆ. ಪ್ರೆಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಚಿತ್ರದ ಸಿನಿಮಾಟೋಗ್ರಫಿ, ವಿಸುವಲ್ಸ್‌, ಗ್ರಾಫಿಕ್ಸ್‌, ವಿಎಫ್‌ಎಕ್ಸ್‌ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

ಧರ್ಮ ಪ್ರೊಡಕ್ಷನ್ಸ್‌ ನಿರ್ಮಿಸಿರುವ ಈ ಚಿತ್ರ ಸೆಪ್ಟೆಂಬರ್‌ 9 ರಂದು ಬೆಳ್ಳಿತರೆಗೆ ಬರಲಿದ್ದು ಸಿನಿಪ್ರಿಯರು ಚಿತ್ರ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಮಾರ್ವೆಲ್‌ ಯುನಿವರ್ಸ್‌ ನಂತೆ ಈ ಚಿತ್ರವು ಭಾರತೀಯ ʼಅಸ್ತ್ರಾವರ್ಸ್‌ʼ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!