ಲವ್​​​​​​ ಮಾಕ್​​ಟೈಲ್-2 ಚಿತ್ರದ ಟ್ರೈಲರ್ ರಿಲೀಸ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

2020ರ ರಿಲೀಸ್​ ಆದ ಲವ್​ ಮಾಕ್​​ಟೈಲ್​ ಸಿನಿಮಾ ಎಲ್ಲರಿಗೂ ಗೊತ್ತೆ ಇದೆ.. ಅಭಿಮಾನಿಗಳ ಮನಸ್ಸು ಸೆಳೆದ ಸಿನಿಮಾವಾಗಿತ್ತು. ಇದೀಗ ಡಾರ್ಲಿಂಗ್ ಕೃಷ್ಣ ಅಭಿನಯಿಸಿ, ನಿರ್ದೇಶನ ಮಾಡಿರುವ ಲವ್​​​​​​ ಮಾಕ್​​ಟೈಲ್-2 ಚಿತ್ರದ ಟ್ರೈಲರ್ ರಿಲೀಸ್​ ಆಗಿದ್ದು, ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಲವ್​ ಮಾಕ್​ಟೈಲ್​​​ 1ರಲ್ಲಿ ನಿಧಿಮಾ ಪಾತ್ರ ಮೃತಪಡುತ್ತೆ. ಲವ್​ ಮಾಕ್​ಟೈಲ್​ 2ನಲ್ಲಿ ಈ ಪಾತ್ರ ಇರುವುದಿಲ್ಲ ಎಂದು ಚಿತ್ರತಂಡ ಹೇಳಿತ್ತು. ಆದರೂ ಲವ್​ ಮಾಕ್​ಟೈಲ್​ 2 ಟ್ರೈಲರ್​ನಲ್ಲಿ ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ಆಮೇಲೆ ಏನಾಗುತ್ತೆ? ಅನ್ನುವುದೇ ಕಥೆ.
ಲವ್ ಮಾಕ್​​​ಟೈಲ್ -2 ಸಿನಿಮಾ ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚಿತವಾಗಿ ರಿಲೀಸ್ ಮಾಡುವ ಪ್ಲಾನ್​​​​​ನಲ್ಲಿ ಚಿತ್ರತಂಡ ಇದೆ.
ಚಿತ್ರದಲ್ಲಿ ಕ್ಯಾಮೆರಾ ವರ್ಕ್​​ ಸೊಗಸಾಗಿ ಮೂಡಿ ಬಂದಿದೆ. ರಾಘವೇಂದ್ರ ಕಾಮತ್ ಬರೆದಿರುವ ಸಾಹಿತ್ಯಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ ಇಂದರ್, ಸುಶ್ಮಿತಾ ಗೌಡ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!