ರೈಲಿಗೆ ಡಿಕ್ಕಿಯಾದ ಟ್ರಕ್: ಭೀಕರ ಅವಘಡಕ್ಕೆ ಎರಡು ಬಲಿ, 50 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅನಿಯಂತ್ರಿತ ರೇಲ್ವೇ ಕ್ರಾಸಿಂಗ್‌ ಬಳಿ ನಿಂತಿದ್ದ ಡಂಪ್‌ ಟ್ರಕ್‌ ಒಂದಕ್ಕೆ ರೈಲು ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿ ತಪ್ಪಿ ನೆಲಕ್ಕುರುಳಿದ್ದು ಘಟನರಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕದ ಉತ್ತರ ಮಿಸೌರಿಯಲ್ಲಿ 243 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಮ್ಟ್ರಾಕ್ ರೈಲು ಅನಿಯಂತ್ರಿತ ಕ್ರಾಸಿಂಗ್‌ನಲ್ಲಿ ಡಂಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು ರೈಲಿನ ಎಂಟು ಬೋಗಿಗಳು ಹಾಗೂ ಎರಡು ಇಂಜಿನ್‌ ಗಳು ನೆಲಕ್ಕುರುಳಿವೆ. ಕೃಷಿ ಭೂಮಿಯಿಂದ ಈ ರೈಲುಹಳಿಯು ಆವೃತವಾಗಿದ್ದು ಒಂದು ಬೋಗಿಯನ್ನು ಹೊರತುಪಡಿಸಿ ಉಳಿದೆಲ್ಲವೂ ಜಖಂ ಆಗಿವೆ ಎಂದು ಮೂಲಗಳು ವರದಿ ಮಾಡಿವೆ.

ಲಾಸ್ ಏಂಜಲೀಸ್‌ನಿಂದ ಚಿಕಾಗೋ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಿಸೌರಿಯ ಮೆಂಡನ್ ಬಳಿ ಈ ಅವಘಡ ಸಂಭವಿಸಿದೆ ಎಂದು U.S. ರಾಷ್ಟ್ರೀಯ ಸಾರಿಗೆ ಸಂಸ್ಥೆ ಆಮ್ಟ್ರಾಕ್ ಹೇಳಿದೆ. ಈ ಕ್ರಾಸಿಂಗ್‌ ನಲ್ಲಿ ಯಾವುದೇ ರೇಲ್ವೇ ದೀಪಗಳು ಅಥವಾ ಸಿಗ್ನಲ್‌ಗಳಿರಲಿಲ್ಲ ಎನ್ನಲಾಗಿದ್ದು ಕನಿಷ್ಠ 50 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!