Tuesday, March 28, 2023

Latest Posts

ನಾಗರಿಕ ಸೇವಾ ಅಧಿಕಾರಿಗಳಿಗೆ ನೀಡಲಾಗ್ತಿದೆ ಕೃತಕಬುದ್ಧಿಮತ್ತೆ ಡೇಟಾ ಅನಾಲಿಟಿಕ್ಸ್‌ ತರಬೇತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ತಂತ್ರಜ್ಞಾನ ಜಾಗತಿಕವಾಗಿ ಭಾರೀ ಸದ್ದು ಮಾಡುತ್ತಿದ್ದು ಜನರು ಹೊಸತಲೆಮಾರಿನ ಈ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟೆಕ್‌ ಕ್ಷೇತ್ರವನ್ನು ಆಳಬಲ್ಲ ಕ್ರಾಂತಿಕಾರಕ ಆವಿಷ್ಕಾರವಿದು ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿರೋ ಹೊತ್ತಲ್ಲಿ ಭಾರತ ಸರ್ಕಾರ ಇದಕ್ಕೆ ಪೂರಕ ನಿರ್ಧಾರಗಳನ್ನು ಅಳವಡಿಸಿಕೊಳ್ಳುತ್ತಿದ್ದು ಇದರ ಭಾಗವಾಗಿ ಆಡಳಿತದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಾಗರಿಕ ಸೇವಾ ಅಧಿಕಾರಿಗಳಿಗೆ ಈ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ.

ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ಹಂಚಿಕೊಂಡಿದ್ದು “ಇಂದಿನ ಆಡಳಿತಾತ್ಮಕ ಸನ್ನಿವೇಶದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪ್ರಮುಖವಾದ ಕೌಶಲ್ಯಗಳನ್ನು ಅಧಿಕಾರಿಗಳಿಗೆ ನೀಡಲಾಗುತ್ತಿದ್ದು ಕೃತಕ ಬುದ್ಧಿಮತ್ತೆ (AI) ಉಪಕರಣಗಳು ಮತ್ತು ಡೇಟಾ ಅನಾಲಿಟಿಕ್ಸ್‌ ಕುರಿತಾಗಿ ತರಬೇತಿಯ ಮೂಲಕ ಅವರನ್ನು ಸಜ್ಜುಗೊಳಿಸಲಾಗುತ್ತಿದೆ” ಎಂದಿದ್ದಾರೆ.

ಮಿಷನ್ ಕರ್ಮಯೋಗಿ ಅಡಿಯಲ್ಲಿ ಈ ತರಬೇತಿ ನೀಡಲಾಗುತ್ತಿದ್ದು ಕೃತಕಬುದ್ಧಿಮತ್ತೆ ಕ್ರಿಯಾತ್ಮಕ ವಿಧಾನ, ಅದರ ನಡವಳಿಕೆಗಳು, ಡೋಮೇನ್‌ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಸಿಂಗ್‌ ಹೇಳಿದ್ದಾರೆ. ಅವರು 124 ನೇ ಇಂಡಕ್ಷನ್ ಟ್ರೈನಿಂಗ್ ಪ್ರೋಗ್ರಾಂ (ಐಟಿಪಿ)ನಲ್ಲಿ ಮಾತನಾಡುತ್ತಿದ್ದರು.

ಇಂಡಕ್ಷನ್ ಟ್ರೈನಿಂಗ್ ಪ್ರೋಗ್ರಾಂ (ಐಟಿಪಿ)ಎಂಬುದು ರಾಜ್ಯ ನಾಗರಿಕ ಸೇವೆಗಳಿಂದ ಭಾರತೀಯ ಆಡಳಿತ ಸೇವೆಗೆ ಬಡ್ತಿ ಪಡೆದ ಅಧಿಕಾರಿಗಳಿಗೆ ನೀಡುವ ತರಬೇತಿ ಕೋರ್ಸ್‌ ಆಗಿದೆ. ಪ್ರಸ್ತುತ ಇದರ 124ನೇ ಬ್ಯಾಚ್‌ ಗೆ ತರಬೇತಿ ನೀಡಲಾಗುತ್ತಿದ್ದು 18 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಿಂದ ಬಂದ 131 ಅಧಿಕಾರಿಗಳು ಈ ಬ್ಯಾಚ್‌ ನಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!