ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಗುನಾ ಜಿಲ್ಲೆಯ ಏರ್ ಸ್ಟ್ರಿಪ್ ನಲ್ಲಿ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಪತನಗೊಂಡು ಇಬ್ಬರು ಪೈಲೆಟ್‌ಗಳಿಗೆ ಗಾಯವಾದ ಘಟನೆ ನಡೆದಿದೆ.
ಎರಡು ಆಸನಗಳ ಸೆಸ್ನಾ 152 ವಿಮಾನ ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಪತನಗೊಂಡಿದೆ. ಘಟನೆಗೆ ಎಂಜಿನ್ ವೈಫಲ್ಯ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.