Monday, December 11, 2023

Latest Posts

ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ತರಬೇತಿ ವಿಮಾನವೊಂದು ಗುರುವಾರ ಸಂಜೆ ಪತನಗೊಂಡಿದೆ.

ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಬಾರಾಮತಿ ತಾಲೂಕಿನಲ್ಲಿ ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನ ಪತನಗೊಂಡಿದ್ದು, ಪೈಲಟ್ ಮತ್ತು ಇನ್ನೊಬ್ಬರು(ಸಹ ಪೈಲಟ್ ಆಗಿರಬಹುದು) ವಿಮಾನದಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಪ್ರಭಾಕರ ಮೋರೆ ಹೇಳಿದ್ದಾರೆ.

ರೆಡ್‌ಬರ್ಡ್ ಇನ್‌ಸ್ಟಿಟ್ಯೂಟ್‌ ಗೆ(ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ) ಸೇರಿದ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಟ್‌ಫಾಲ್ ಗ್ರಾಮದ ಬಳಿ ಸಂಜೆ 5 ಗಂಟೆ ಸುಮಾರಿಗೆ ಅಪಘಾತಕ್ಕೀಡಾಯಿತು.

ಖಾಸಗಿ ವಿಮಾನಯಾನ ಕಂಪನಿಯ ತರಬೇತು ವಿಮಾನ ಬಾರಾಮತಿಯಲ್ಲಿ ರನ್‌ ವೇಯಿಂದ ಟೇಕಾಫ್ ಆಗಿತ್ತು, ಆದರೆ ಕೆಲವು ತಾಂತ್ರಿಕ ದೋಷದಿಂದಾಗಿ ಸಂಜೆ ಕಟ್‌ ಫಾಲ್ ಗ್ರಾಮದ ಬಳಿ ಕ್ರ್ಯಾಶ್-ಲ್ಯಾಂಡ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!