ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ಬಗ್ಗೆ ಇದೇ ಮೊದಲ ಬಾರಿಗೆ ಯತೀಂದ್ರ ಮಾತನಾಡಿದ್ದಾರೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರದ್ದು ನೀಚ ರಾಜಕಾರಣ, ನನ್ನ ಬಾಯಿಂದ ಹಣ, ಟ್ರಾನ್ಸ್ಫರ್ ಅನ್ನೋ ಪದಗಳೇ ಬಂದಿಲ್ಲ. ಅವರು ಅಧಿಕಾರದಲ್ಲಿದ್ದಾಗ ಬರೀ ದಂಧೆಗಳೇ ಮಾಡ್ತಿದ್ರೇನೋ ಅದಕ್ಕೆ ಅವರ ತಲೆಲಿ ಬರೀ ದಂಧೆ, ಲಂಚ ಅನ್ನೋದೇ ತುಂಬಿದೆ ಎಂದಿದ್ದಾರೆ.
ಸಿಎಸ್ಆರ್ ಫಂಡ್ ಬಗ್ಗೆ ನಾನು ಮಾತಾಡಿದ್ದು, ರಾಜ್ಯದ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಬೇಕಾದ್ರೆ ಸಾಕ್ಷಿ ಇಟ್ಟುಕೊಂಡು ಮಾತನಾಡಬೇಕು, ಸುಮ್ಮನೆ ಆರೋಪ ಮಾಡೋದಿಲ್ಲ. ನಾವು ಯಾವ ದಂಧೇನೂ ಮಾಡ್ತಿಲ್ಲ. ವಿವೇಕಾನಂದ ಯಾರು ಅನ್ನೋದೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
ವರುಣಾ ಕ್ಷೇತ್ರದ ಮಾಜಿ ಶಾಸಕ ನಾನು, ಇಲ್ಲಿನ ಕೆಲಸಗಳನ್ನು ಮಾಡ್ತಿದ್ದೇನೆ, ನೂರಾರು ಕೆಲಸಗಳಿರುತ್ತವೆ. ವರ್ಗಾವಣೆ ಪ್ರತೀ ಸರ್ಕಾರದಲ್ಲೂ ಆಗುತ್ತದೆ ಎಂದಿದ್ದಾರೆ. ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡೋ ಅವಶ್ಯಕತೆ ಇಲ್ಲ ಎಂದು ಅಪ್ಪನಿಗೆ ಹೇಳಿದ್ದೇನೆ. ಇಲ್ಲಿ ಸ್ಪಷ್ಟನೆ ಕೊಡೋಕೆ ಏನಿಲ್ಲ. ತಪ್ಪು ಮಾಡಿಲ್ಲ ಅಂದಮೇಲೆ ಭಯ ಇಲ್ಲ ಎಂದಿದ್ದಾರೆ.