ಸೋಲೋ ಟ್ರಿಪ್ ಅನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಹೊಸ ಸ್ಥಳಗಳನ್ನು ಅನ್ವೇಷಿಸಲು, ವಿಭಿನ್ನ ಸಂಸ್ಕೃತಿಗಳ ಜನರನ್ನು ಭೇಟಿ ಮಾಡಲು ಮತ್ತು ನೆಮ್ಮದಿಯಾಗಿ ವಿರಾಮ ತೆಗೆದುಕೊಳ್ಳಲು ಜನರು ಸೋಲೋ ಟ್ರಿಪ್ ಮಾಡುತ್ತಾರೆ.
ಈ ಸೋಲೋ ಟ್ರಿಪ್‌ನಲ್ಲಿ ಮೊದಲು ಬರುವ ಸಮಸ್ಯೆಯೆಂದರೆ ಅದು ಸುರಕ್ಷತೆ. ಅದರಲ್ಲೂ ವಿಶೇಷವಾಗಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಸುರಕ್ಷತೆಯ ಸಮಸ್ಯೆ ಎದುರಾಗಬಹುದು. ಇಲ್ಲಿ ಸುರಕ್ಷಿತ ದೇಶಗಳ ಪಟ್ಟಿಯನ್ನು ನಿಮಗೆ ಕೊಡುತ್ತಿದ್ದೇವೆ. ನೀವು ಮಹಿಳೆಯಾಗಿದ್ದರು ಏಕಾಂಗಿಯಾಗಿ ಈ ದೇಶಗಳಿಗೆ ಟ್ರಾವೆಲ್ ಮಾಡಬಹುದು.
ಜೆಕ್ ರಿಪಬ್ಲಿಕ್: ಯುರೋಪ್‌ನಲ್ಲಿರುವ ಜೆಕ್ ರಿಪಬ್ಲಿಕ್ ರಾಜಧಾನಿ ಪ್ರೇಗ್ ವಿಶ್ವ ಪ್ರಸಿದ್ಧ ತಾಣವಾಗಿದೆ. ಇದು ಶ್ರೀಮಂತ ವಾಸ್ತುಶಿಲ್ಪ, ಸಾಂಸ್ಕೃತಿಕ ಪರಂಪರೆ, ಭವ್ಯವಾದ ಸೇತುವೆಗಳು, ಕಿರಿದಾದ ಬೀದಿಗಳು, ಹಳೆಯ ಕೋಟೆಗಳಿಗೆ ಹೆಸರುವಾಸಿಯಾಗಿದೆ. ಈ ದೇಶದ 12 ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ನ್ಯೂಜಿಲೆಂಡ್: ಇದು ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ನ್ಯೂಜಿಲೆಂಡ್ ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ನ್ಯೂಜಿಲೆಂಡ್ ನಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಫ್ರಾಂಜ್ ಜೋಸೆಫ್ ಗ್ಲೇಸಿಯರ್, ಫಿಯೋರ್ಡ್‌ಲ್ಯಾಂಡ್ ನ್ಯಾಷನಲ್ ಪಾರ್ಕ್ ಮತ್ತು ಮೌಂಟ್ ಈಡನ್.
ಕೆನಡಾ: ವಿಶಾಲವಾದ ಕಾಡು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಶ್ರೀಮಂತ ಸಂಸ್ಕೃತಿಯು ಪ್ರಪಂಚದಾದ್ಯಂತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದು ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ.
ಸ್ವಿಟ್ಜರ್ಲೆಂಡ್: ಸ್ವಿಟ್ಜರ್ಲೆಂಡ್ ಪ್ರಪಂಚದಾದ್ಯಂತದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೇಶವು ತನ್ನ ನೈಸರ್ಗಿಕ ಸೌಂದರ್ಯ, ಉಸಿರುಕಟ್ಟುವ ಭೂದೃಶ್ಯಗಳು, ಹಿಮದಿಂದ ಆವೃತವಾದ ಪರ್ವತಗಳು, ಹಸಿರು ಕಣಿವೆಗಳು ಮತ್ತು ಚಾಕೊಲೇಟ್‌ಗಳಿಗೆ ಹೆಸರುವಾಸಿಯಾಗಿದೆ.
ಐಸ್ಲ್ಯಾಂಡ್: ಗ್ಲೋಬಲ್ ಪೀಸ್ ಇಂಡೆಕ್ಸ್ ಪ್ರಕಾರ ಐಸ್ಲ್ಯಾಂಡ್ ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಐಸ್‌ಲ್ಯಾಂಡ್‌ನ 15 ಪ್ರತಿಶತದಷ್ಟು ಪ್ರದೇಶವು ಹಿಮನದಿಗಳಿಂದ ಆವೃತವಾಗಿದೆ. ಐಸ್‌ಲ್ಯಾಂಡ್‌ನ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪ್ರಸಿದ್ಧ ನಾರ್ದರ್ನ್ ಲೈಟ್ಸ್, ದಿ ಬ್ಲೂ ಲಗೂನ್, ಗೀಸಿರ್ ಹಾಟ್ ಸ್ಪ್ರಿಂಗ್ಸ್ ಮತ್ತು ಪಿಂಗ್‌ವೆಲ್ಲಿರ್ ನ್ಯಾಷನಲ್ ಪಾರ್ಕ್.