ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ-ದಕ್ಷಿಣ ವಿಭಜನೆಯ ಕುರಿತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಕೆಟಿ ರಾಮರಾವ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಕ್ಷಿಣವನ್ನು ಪ್ರತ್ಯೇಕ ದೇಶವಾಗಿ ಪರಿಗಣಿಸುವುದು ‘ಅತ್ಯಂತ ಆಕ್ಷೇಪಾರ್ಹ’ ಎಂದು ಹೇಳಿದರು.
“ಈ ದೇಶವನ್ನು ಮತ್ತೆ ಎಂದಿಗೂ ವಿಭಜಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ವಿಭಜಿಸಿ ಎಂದು ಹೇಳಿದ್ದರು ಮತ್ತು ಕಾಂಗ್ರೆಸ್ ಈ ಹೇಳಿಕೆಯಿಂದ ದೂರವಿಲ್ಲ, ದೇಶದ ಜನರು ಯೋಚಿಸಬೇಕು, ಇದು ಕಾಂಗ್ರೆಸ್‌ನ ಅಜೆಂಡಾ.” ಎಂದು ವಾಗ್ದಾಳಿ ನಡೆಸಿದ್ದಾರೆ.
“ದಕ್ಷಿಣ ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ಅತ್ಯಂತ ಆಕ್ಷೇಪಾರ್ಹವಾಗಿದೆ” ಎಂದು ಶಾ ಹೇಳಿದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಪ್ರತಿಪಾದಿಸಿದ ಗೃಹ ಸಚಿವರು, “ಬಿಜೆಪಿಯು ದಕ್ಷಿಣದ ಐದು ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ” ಎಂದಿದ್ದಾರೆ.