ಹೊಸದಿಗಂತ ವರದಿ, ವಿಜಯನಗರ:
ಹೊಸಪೇಟೆ ನಗರದಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಪಟೇಲ್ ನಗರದಲ್ಲಿ ಎರಡು ಮರಗಳು ಧರೆಗುರುಳಿದ್ದು, ಆಟೋದಲ್ಲಿದ್ದ ಪ್ರಯಾಣಿಸುತ್ತಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಾಹ್ನ ೩ ಗಂಟೆಯಿoದ ಆಗೊಮ್ಮೊ- ಈಗೊಮ್ಮೆ ಅಬ್ಬರಿಸುತ್ತಿದ್ದ ಮಳೆ, ಸಂಜೆ ೫ ಗಂಟೆ ವೇಳೆಗೆ ಬೀಸಿದ ಬಿರುಗಾಳಿ ಪಟೇಲ್ ನಗರದ ಎರಡು ಬೃಹತ್ ಮರಗಳು ರಸ್ತೆಗುರುಳಿವೆ. ಈ ಪೈಕಿ ಒಂದು ಗಿಡ ಚಲಿಸುತ್ತಿದ್ದ ಆಟೋ ಮೇಲೆ ಉರುಳಿದೆ. ಆದರೆ, ಅದಕ್ಕೂ ಮುನ್ನ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ತುಂಡಾಗಿದೆ. ಈ ವೇಳೆ ಆಟೋದಲ್ಲಿದ್ದ ಓರ್ವ ಪ್ರಯಾಣಿಕ ಹಾಗೂ ಆಟೋ ಚಾಲಕ ಅಪಾಯವನ್ನು ಅರಿತು ಕ್ಷಣಾರ್ಧದಲ್ಲಿ ಆಟೋ ನಿಲ್ಲಿಸಿ, ದೂರಕ್ಕೆ ಓಡಿ ಹೋಗಿದ್ದಾರೆ. ಇದರಿಂದ ಸಂಭವಿಸಬಹುದಾದ ದೊಡ್ಡ ದುರಂತವೊoದು ಕೂದಲೆಳೆ ಅಂತರದಲ್ಲಿ ತಪ್ಪಿದ್ದಂತಾಗಿದೆ.
ಇದೇ ಮರದ ಬುಡ ಮೇಲಾಗಿದ್ದರಿಂದ ಪಕ್ಕದ್ದಲ್ಲೇ ನಿಂತಿದ್ದ ಇನ್ನೋವಾ ಕಾರು, ಆಟೋ ಹಾಗೂ ರಸ್ತೆ ಮತ್ತೊಂದು ಬದಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಮೇಲೆ ಮರ ಮುರಿದು ಬಿದಿದ್ದಿದೆ.
ಎರಡು ಬೃಹತ್ ಮರಗಳು ಉರುಳಿ ಬಿದ್ದಿದ್ದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ನೆಲಕ್ಕುರುಳಿದ ಮರಗಳ ತೆರವು ಕಾರ್ಯ ನಡೆಯುತ್ತಿದೆ.