ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಜಬರ್ವಾನ್‌ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನ ವೇಳೆ ಇಬ್ಬರು ಚಾರಣಿಗರು ಸಿಕ್ಕಿಕೊಂಡ ಘಟನೆ ನಡೆದಿದೆ.
ಈ ಕೂಡಲೇ ಚಾರಣಿಗರು ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 100ಕ್ಕೆ ಕರೆ ಮಾಡಿಮಾಹಿತಿ ನೀಡಿದ್ದಾರೆ. ಬಳಿಕ ಚಾರಣಿಗರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಭಯೋತ್ಪಾದಕರ ಇರುವಿಕೆಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳು ಜಬರ್ವಾನ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಈ ವೇಳೆ ಚಾರಣಿಗರು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಬಳಿಕ ಅವರು ಬಂಡೆಗಳ ನಡುವೆ ಅಡಗಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಭದ್ರತಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅವರನ್ನು ರಕ್ಷಿಸಲಾಗಿದೆ.
ಈ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಕಾಶ್ಮೀರ ಪೊಲೀಸ್ ಮುಖ್ಯಸ್ಥ ವಿಧಿ ಕುಮಾರ ಬಿರ್ಡಿಯವರು, ಚಾರಣಿಗರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ವಿಶೇಷವಾಗಿ ಭದ್ರತಾ ಕಾರ್ಯಾಚರಣೆಗಳು ಇರುವ ಪ್ರದೇಶಗಳಲ್ಲಿ ಈ ಅನಿರೀಕ್ಷಿತ ಘಟನೆಗಳು ಸಂಭವಿಸಿದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ತ್ವರಿತವಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.
ಸ್ಥಳೀಯರು, ಪ್ರವಾಸಿಗರು ಮತ್ತು ವಿಶೇಷವಾಗಿ ಚಾರಣಿಗರು ಸಂಕಷ್ಟದಲ್ಲಿದ್ದಾಗ 100ಕ್ಕೆ ಅಥವಾ ನೇರವಾಗಿ ಪೊಲೀಸ್ ಠಾಣೆಗೆ ತಲುಪುವುದು ಸೇರಿದಂತೆ ಸಹಾಯವಾಣಿ ಸೇವೆಗಳನ್ನು ಬಳಸಲು ನಾವು ಪ್ರೋತ್ಸಾಹಿಸುತ್ತೇವೆ. ಈ ಮೂಲಕ ಪೊಲೀಸರ ತ್ವರಿತ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.