ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಚಾಪು ಮೂಡಿಸಿದ್ದಾಳೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಕಾಲಿಡದ ಕ್ಷೇತ್ರವಿಲ್ಲ. ಮಹಿಳೆ ಇಂದು ಕುಟುಂಬ ಹಾಗೂ ವೃತ್ತಿ ಎರಡನ್ನು ಸಮವಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ತಮಿಳುನಾಡಿನ ಈ ಮಹಿಳೆ.
ಹೌದು, ಸಾಮಾನ್ಯವಾಗಿ ಟ್ರಕ್ಗಳನ್ನು ಗಂಡಸರೇ ಹೆಚ್ಚಾಗಿ ಓಡಿಸುವುದು ಕಾಣುತ್ತೇವೆ. ಆದರೆ ಇಲ್ಲಿಮಹಿಳೆಯೊಬ್ಬರು ಭಾರಿ ಗಾತ್ರದ ಟ್ರಕ್ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಗಟ್ಟಿತನಕ್ಕೆ ಶಹಭಾಷ್ ಎನ್ನುತ್ತಿದ್ದಾರೆ.
ट्रक को इससे क्या मतलब कि चलाने वाला ‘पुरुष’ है या ‘महिला.’ ❤️ pic.twitter.com/g9IEAocv7p
— Awanish Sharan (@AwanishSharan) July 17, 2022
ಛತ್ತೀಸ್ಗಡ್ ಕೇಡಾರ್ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಹಿಳೆಯ ಇರಲಿ ಪುರುಷನೇ ಇರಲಿ ಟ್ರಕ್ ಚಿಂತೆ ಮಾಡಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.
ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಟ್ರಕ್ ಹೆದ್ದಾರಿಯಲ್ಲಿ ವೇಗವಾಗಿ ಚಲಾಯಿಸುತ್ತಿದ್ದಾರೆ. ಇತ್ತ ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಯತ್ತ ಮಹಿಳಾ ಚಾಲಕಿ ನಗುಬೀರಿ ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ಮಹಿಳೆಯ ಧೈರ್ಯ ಹಾಗೂ ವಿಶ್ವಾಸ ತುಂಬಿದ ನಗುವನ್ನು ಕೊಂಡಾಡಿದ್ದಾರೆ.