ಟ್ರೈ ಮಾಡಿದ್ರಾ ಬಿಸಿ ಬಿಸಿ ಬಿಸಿಲ ಬೇಗೆಗೆ ತಂಪು ತಂಪು ಮ್ಯಾಂಗೋ ಜ್ಯೂಸ್ ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೇಳಿ ಕೇಳಿ ಈಗ ಮಾವಿನ ಸೀಜನ್. ಜೊತೆಗೆ ಬಿರು ಬೇಸಗೆ ಬೇರೆ. ಉರಿ ಬೇಗೆಗೆ ದೇಹಕ್ಕೂ ತಂಪು, ಬಾಯಾರಿಕೆಯೂ ಮಾಯ ಮಾಡುವ ಜ್ಯೂಸ್ ಸಿಕ್ಕಿದರೆ ಅದರ ಮಜಾನೇ ಬೇರೆ ಅಲ್ವಾ?
ಹಾಗಿದ್ರೆ ಬನ್ನಿ ಇವತ್ತು ಜಟ್ ಫಟ್ ಒಂದು ಮ್ಯಾಂಗೋ ಜ್ಯೂಸ್ ಮಾಡೋಣ…

ಏನೇನು ಬೇಕು?
ಮಾವಿನ ಹಣ್ಣಿನ ರಸ ಎರಡು ಲೋಟ,
ಸಕ್ಕರೆ ಆರು ಲೋಟ,
ಒಂದು ಲೋಟ ನೀರು,
ಚಿಟಿಕೆ ಉಪ್ಪು.

ಹೀಗೆ ಮಾಡೋದು?
ಚೆನ್ನಾಗಿ ಹಣ್ಣಾದ ಮಾವನ್ನು ಶುಚಿಯಾಗಿ ತೊಳೆದಿಟ್ಟುಕೊಳ್ಳಿ. ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಿರಿ. ಸಿಪ್ಪೆ, ವಾಟೆಯನ್ನು ಬೇರ್ಪಡಿಸಿ ತಿರುಳನ್ನು ಮಾತ್ರ ಪ್ರತ್ಯೇಕವಾಗಿ ಕಿವುಚಿಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ, ಅರ್ಧಕಪ್ ನೀರು ಸೇರಿಸಿ ಒಲೆಯಲ್ಲಿ ಕುದಿಸಿ. ಚೆನ್ನಾಗಿ ಕುದಿದು ನಾರುಪಾಕ ಬಂದ ತಕ್ಷಣ ಕಿವುಚಿಟ್ಟುಕೊಂಡ ಮಾವಿನ ಹಣ್ಣಿನ ರಸಾಯನವನ್ನು ಅದರಲ್ಲಿ ಹಾಕಿ ಮತ್ತಷ್ಟುಹೊತ್ತು ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಪಾತ್ರೆಯನ್ನಿಳಿಸಿ ತಣ್ಣಗಾಗುವವ ತನಕ ಬಿಟ್ಟುಬಿಡಿ. ತಣ್ಣಗಾದ ಪಲ್ಪ್ ಗಾಜಿನ ಬಾಟಲಿಗೆ ತುಂಬಿಡಿ. ಒಂದು ಲೋಟ ತಣ್ಣಗಿನ ನೀರಿನೊಂದಿಗೆ ಒಂದು ಚಮಚ ಪಲ್ಪ್ ಸೇರಿಸಿ ಕುಡಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!