Wednesday, October 5, 2022

Latest Posts

ರಾಷ್ಟ್ರಗೀತೆಗೆ ಗೌರವ: ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್‌ ನಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿಂಬಾಬ್ವೆ ವಿರುದ್ಧ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆ. ಎಲ್.ರಾಹುಲ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರಿಕೆಟ್ ಪಂದ್ಯ ಶುರುವಾಗುವುದಕ್ಕೂ ಮುಂಚಿತವಾಗಿ ಉಭಯ ದೇಶಗಳ ರಾಷ್ಟ್ರಗೀತೆ ಹಾಡುವುದು ಸಂಪ್ರದಾಯ. ನಿನ್ನೆಯೂ ಭಾರತ-ಜಿಂಬಾಬ್ವೆ ರಾಷ್ಟ್ರಗೀತೆ ಹಾಡಲಾಯಿತು. ಈ ವೇಳೆ ಚ್ಯೂಯಿಂಗ್ ಗಮ್​ ಜಗಿಯುತ್ತಿದ್ದ ರಾಹುಲ್​, ಇನ್ನೇನು ರಾಷ್ಟ್ರಗೀತೆ ಆರಂಭವಾಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ತೆಗೆದು ಎಸೆದಿದ್ದಾರೆ. ಈ ಮೂಲಕ ಗೌರವ ನೀಡಿದ್ದಾರೆ.

 

ಕೆ ಎಲ್ ರಾಹುಲ್​​ ನಡೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳಿದ್ದು, ನಿಮ್ಮಿಂದ ನಮಗೆ ಮತ್ತಷ್ಟು ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್‌ಗಳನ್ನು ಮಾಡಿದ್ದಾರೆ.

ಇಶಾನ್ ಕಿಶನ್ ಮೇಲೆ ಕೀಟ ದಾಳಿ:

 

ರಾಷ್ಟ್ರಗೀತೆ ನಡೆಯುತ್ತಿದ್ದಾಗ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್​ ಇಶಾನ್ ಕಿಶನ್ ಹತ್ತಿರ ಕೀಟವೊಂದು ಸುಳಿದಾಡಿ ಕಣ್ಣಿಗೆ ತಾಗಿದೆ. ಇದರಿಂದ ಅರೆಕ್ಷಣ ಗಲಿಬಿಲಿಗೊಂಡು ಪಕ್ಕದಲ್ಲಿ ನಿಂತುಕೊಂಡಿದ್ದ ಕುಲ್ದೀಪ್ ಯಾದವ್​ ಅವರ ಕಡೆ ನೋಡಿ, ಸುಮ್ಮನೆ ನಿಂತುಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!