ಟ್ರಯಲ್‌ ರೂಂನಲ್ಲಿ ಯುವತಿ ಬಟ್ಟೆ ಬದಲಿಸುವ ದೃಶ್ಯ ಸೆರೆಹಿಡಿಯಲೆತ್ನಿಸಿದ ಕಾಮುಕ ಅಂದರ್

 

ಹೊಸದಿಗಂತ ವರದಿ, ಕಾಸರಗೋಡು:
ಸ್ಪೋರ್ಟ್ಸ್ ಡ್ರೆಸ್‌ ಖರೀದಿಸಿ ಟ್ರಯಲ್ ರೂಮ್ ಗೆ ತೆರಳಿದ ಯುವತಿಯೊಬ್ಬಳ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲು ಯತ್ನಿಸಿ ಅಂಗಡಿ ನೌಕರ ಸಿಕ್ಕಿಬಿದ್ದಿದ್ದಾನೆ.
ಆಸಿಫ್ (24) ಹೀನ ಕೃತ್ಯ  ನಡೆಸಿದ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ವಶಕ್ಕೆ ಪಡೆದಿರುವ ಕುಂಬಳೆ ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ:
ಬಂದ್ಯೋಡು ಪೇಟೆಯ ಹೃದಯ ಭಾಗದಲ್ಲಿರುವ ಸ್ಪೋರ್ಟ್ಸ್ ಡ್ರೆಸ್ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಗೆ ಯುವತಿ ತನ್ನ ಸಂಬಂಧಿಯೊಂದಿಗೆ ಬಂದಿದ್ದರು. ಈ ವೇಳೆ ಬಟ್ಟೆ ಖರೀದಿಸಿ ಅಳತೆ ನೋಡುವಂತೆ ಒತ್ತಾಯಿಸಿ ಅಂಗಡಿ ನೌಕರ ರೂಮ್ ನೊಳಗೆ ಕಳುಹಿಸಿದ್ದ. ಈ ಸಂದರ್ಭದಲ್ಲಿ ಅಲ್ಲಿ ತನ್ನ ಮೊಬೈಲ್ ಇರಿಸಿ ಯುವತಿ ಡ್ರೆಸ್ ಬದಲಾಯಿಸುವ ದೃಶ್ಯ ಸೆರೆಹಿಡಿಯಲೆತ್ನಿಸಿದ. ಅದನ್ನು ಗಮನಿಸಿದ ಯುವತಿಯು ಈ ಬಗ್ಗೆ ಆತನ್ನನು ತರಾಟೆಗೆ ತೆಗೆದುಕೊಂಡು, ಆರೋಪಿ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಕಳೆದ ಅನೇಕ ವರ್ಷಗಳಿಂದ ಈ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ಇಂತಹ ಚಾಳಿಯನ್ನು ಹವ್ಯಾಸವಾಗಿರಿಸಿದ್ದ ಎನ್ನಲಾಗಿದೆ. ಯುವತಿಯರು ಬಟ್ಟೆ ಬದಲಾಯಿಸುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು , ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!