‘ಕಾಳಿ’ ಕುರಿತು ವಿವಾದಿತ ಹೇಳಿಕೆ ನೀಡಿದ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನನಗೆ ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ವಿವಾದಿತ ಹೇಳಿಕೆ ನೀಡಿದ್ದಾರೆ.
ಚಿತ್ರ ನಿರ್ಮಾಪಕಿ,ನಟಿ ಲೀನಾ ಮಣಿಮೇಕಲೈ ಕಾಳಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ವಿವಾದಿತ ಫೋಟೋ ವೈರಲ್ ಮಾಡಿರುವ ಬೆನ್ನಲ್ಲೇ ಸಂಸದೆ ಪ್ರತಿಕ್ರಿಯೆ ನೀಡುವ ಬರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಅದಕ್ಕೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಬಾರದು. ಕೆಲವೊಂದು ಸ್ಥಳಗಳಲ್ಲಿ ದೇವರಿಗೆ ವಿಸ್ಕಿ ಅರ್ಪಣೆ ಮಾಡಲಾಗ್ತದೆ, ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ಮಾಂಸ ಕೂಡ ನೈವೇದ್ಯ ರೀತಿಯಲ್ಲಿ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ನೀವು ಸಿಕ್ಕಿಂ ಮತ್ತು ಭೂತಾನ್​ಗೆ ಹೋದರೆ ಅಲ್ಲಿನ ಜನರು ಬೆಳಗ್ಗೆ ಪೂಜೆ ಮಾಡುವಾಗ ದೇವರಿಗೆ ವಿಸ್ಕಿ ನೀಡುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಅದನ್ನ ತಿರಸ್ಕಾರ ಮಾಡಲಾಗುತ್ತದೆ. ದೇವರನ್ನ ಪೂಜೆ ಮಾಡುವ ಸ್ವಾತಂತ್ರ್ಯ ಅವರ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಪ್ರಕಾರ ಕಾಳಿ ಮಾತೆ ಮದ್ಯ ಸೇವಿಸುವ ಹಾಗೂ ಮಾಂಸ ತಿನ್ನುವ ದೇವತೆಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ.
ಹಿಂದು ಜನರ ಭಾವನೆಗಳಿಗೆ ದಕ್ಕೆ ತಂದ ಆ ಪೋಸ್ಟ್:
ಲೀನಾ ಮಣಿಮೇಕಲೈ ಶೇರ್ ಮಾಡಿರುವ ಫೋಟೋದಲ್ಲಿ ಕಾಳಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ತಾರೆ ಕೈಯಲ್ಲಿ ಸಿಗರೇಟು ಹಿಡಿದುಕೊಂಡಿದ್ದಾರೆ. ಸಮುದಾಯವೊಂದರ ಧ್ವಜ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!