ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನವಮಿ ದಿನವಾದ ಇಂದು ವಾರಣಾಸಿ ಮುಸ್ಲಿಂ ಮಹಿಳೆಯರು ಶ್ರೀರಾಮನಿಗೆ ಆರತಿ ಎತ್ತಿ ಪೂಜೆ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ಇದೇ ವೇಳೆ ಶ್ರೀರಾಮನ ಆಶೀರ್ವಾದ ಹಾಗೂ ಅನುಗ್ರಹದಿಂದ ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಹಾಗೂ ವಕ್ಪ್ ಬಿಲ್ ತಿದ್ದುಪಡಿ ಮಸೂದೆ ಪಾಸ್ ಆಗಿದೆ ಎಂದಿದ್ದಾರೆ.
ವಾರಣಾಸಿಯ ಮುಸ್ಲಿಮ್ ಮಹಿಳಾ ಫೌಂಡೇಶನ್ ಹಾಗೂ ವಿಶಾಲ ಭಾರತ ಸಂಸ್ಥಾನ ಜಂಟಿಯಾಗಿ ಶ್ರೀರಾಮ ಆರತಿ ಪೂಜೆ ಮಾಡಿದೆ. ರಾಮನವಮಿ ಪ್ರಯುಕ್ತ ವಿಶೇಷ ರಂಗೂಲಿ ಬಿಡಿಸಲಾಗಿದೆ. ಶ್ರೀರಾಮ ಮಂದಿರವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಉರ್ದುವಿನಲ್ಲಿ ಶ್ರೀರಾಮ ಮಂದು ಮುಸ್ಲಿಮ್ ಮಹಿಳಾ ಫೌಂಡೇಶನ್ ಬರೆದು ಶ್ರೀರಾಮನವಿಗೆ ವಿಶೇಷ ಆರತಿ ಪೂಜೆಯನ್ನು ಮಾಡಿದೆ. ಕಳೆದ 19 ವರ್ಷಗಳಿಂದ ವಾರಣಾಸಿ ಮುಸ್ಲಿಮ್ ಮಹಿಳೆಯರು ರಾಮನವಮಿ ದಿನ ಶ್ರೀರಾಮನಿಗೆ ವಿಶೇಷ ಆರತಿ ಪೂಜೆ ಮಾಡುತ್ತಿದ್ದಾರೆ. ಈ ಬಾರಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.
ಈ ವೇಳೆ ಮಾತನಾಡಿದ ವಾರಣಾಸಿ ಮುಸ್ಲಿಮ್ ಮಹಿಳಾ ಫೌಂಡೇಶನ್ ಸದಸ್ಯೆ ನಝ್ನೀನ್ ಅನ್ಸಾರಿ, ಅರಬ್, ತುರ್ತಿ, ಮೊಘಲರು ಭಾರತದ ಮೇಲೆ ದಾಳಿ ಮಾಡಿದರು. ಇಲ್ಲಿನವರ ಧರ್ಮ ಬದಲಾಯಿಸಿದರು. ಅನಿವಾರ್ಯವಾಗಿ ಬದಲಾಗಬೇಕಾಯಿತು. ಆದರೆ ನಾವು ತುರ್ಕರು, ಅರಬ್ಬರ ಸಂಸ್ಕೃತಿಯನ್ನು ಅನುಸರಿಸುತ್ತಿಲ್ಲ. ಭಾರತದ ಸಂಸ್ಕೃತಿಯಲ್ಲಿ ರಾಮನೇ ಸರ್ವಶ್ರೇಷ್ಠ. ಆತನೇ ಆದರ್ಶ. ಆತನೇ ನಮ್ಮ ಪೂರ್ವಜ. ನಮ್ಮ ಪೂರ್ವಜ ಹಾಗೂ ಆ ಸಂಸ್ಕೃತಿಯನ್ನು ಮರೆಯಲು ಸಾಧ್ಯವೇ ಎಂದು ಹೇಳಿದ್ದಾರೆ. ನಮ್ಮ ಪೂರ್ವಜರು ರಾಮನ ಭಕ್ತರಾಗಿದ್ದರು. ಈಗ ನಮ್ಮ ಮತ ಬದಲಾಗಿದೆ. ಆದರೆ ನಾವೂ ಕೂಡ ರಾಮನ ಭಕ್ತರು ಎಂದು ಅನ್ಸಾರಿ ಹೇಳಿದ್ದಾರೆ.
ಶ್ರೀರಾಮನ ಆಶೀರ್ವಾದದಿಂದ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಗೊಂಡಿದೆ. ಈ ಬಿಲ್ ಪಾಸ್ ಆಗಲು ಶ್ರೀರಾಮನ ಅನುಗ್ರಹವಿತ್ತು. ಇದೀಗ ವಕ್ಪ್ ತಿದ್ದುಪಡಿ ಮಸೂದೆ ಕೂಡ ಪಾಸ್ ಆಗಿದೆ ಎಂದು ಅನ್ಸಾರಿ ಹೇಳಿದ್ದಾರೆ. ರಾಮನವಮಿ ನಮ್ಮ ದೇಶದ ಸಂಸ್ಕೃತಿ. ದೇಶದ ಆಚರಣೆ. ಇದರಲ್ಲಿ ನಾವು ಪಾಲ್ಗೊಂಡಿದ್ದೇವೆ ಎಂದಿದ್ದಾರೆ.