ಹೊಸದಿಗಂತ ಹುಬ್ಬಳ್ಳಿ:
ಇತ್ತೀಚೆಗೆ ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟಿಂಗ್ ಕ್ರೀಡಾಕೂಟದಲ್ಲಿ ಹುಬ್ಬಳ್ಳಿಯ ಯುವ ಸ್ಕೇಟರ್ ತ್ರಿಷಾ ಪ್ರವೀಣ ಜಡಲಾ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಳೆದ 10 ವರ್ಷ ದಿಂದ ಸ್ಕೇಟಿಂಗ್ ಉತ್ಸಾಹದಿಂದ ಅಭ್ಯಾಸ ಮಾಡಿದ್ದರು.
ಇದು ಸುದೀರ್ಘ ಮತ್ತು ಸವಾಲಿನ ಪ್ರಯಾಣವಾಗಿದೆ. ಆದರೆ ಈ ಪದಕವು ಎಲ್ಲಾ ಕಠಿಣ ಪರಿಶ್ರಮವನ್ನು ಸಾರ್ಥಕಗೊಳಿಸುತ್ತದೆ. ಇತರ ಯುವ ಕ್ರೀಡಾಪಟುಗಳಿಗೆ ತಮ್ಮ ಕನಸುಗಳನ್ನು ದೃಢವಾಗಿ ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತ್ರಿಷಾ ಜಡಲಾ ತಿಳಿಸಿದ್ದಾರೆ. ಯುವತಿ ಈ ಸಾಧನೆಗೆ ಹು-ಧಾ ಅವಳಿನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.