ಹೊಸದಿಗಂತ ವರದಿ, ಅಂಕೋಲಾ
ನಿಯಂತ್ರಣ ತಪ್ಪಿದ ಟ್ರಾಲಿ ವಾಹನವೊಂದು ಕಂಟೇನರ್ ಲಾರಿಯೊಂದಕ್ಕೆ ಅಪ್ಪಳಿಸಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ತಾಲೂಕಿನ ರಾಮನಗುಳಿ ದುಗ್ಗನಬೈಲ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ಕಂಟೇನರ್ ಲಾರಿ ಚಾಲಕ ರಾಮನಗರ ಜಿಲ್ಲೆ ಮಾಗಡಿ ನಿವಾಸಿ ರಘು ಶ್ರೀನಿವಾಸ (22), ಟ್ರಾಲಿ ಲಾರಿ ಚಾಲಕ ಸಾಂಗ್ಲಿ ಮಹಾರಾಷ್ಟ್ರ ನಿವಾಸಿ ಮಾರುತಿ ಕಿಶನ್ ಶಲಕೆ (27) ಮತ್ತು ಸಹಾಯಕ ಚಾಲಕ ತುಕಾರಾಮ ಗೋವಿಂದ ಶೇದಾಳ(60) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಟ್ರಾಲಿ ಲಾರಿ ಚಾಲಕನ ಮೇಲೆ ನಿರ್ಲಕ್ಷ್ಯದ ಚಾಲನೆಯ ದೂರು ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿದ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.