ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ತಯಾರಾದ ನಂತರ ಸಿನಿ ತಾರೆಯರು ಪ್ರಮೋಷನ್‌ಗೆ ಹೋಗುತ್ತಾರೆ. ಇದೇ ರೀತಿ ಗೆಹ್ರಾರಿಯಾ ಸಿನಿಮಾ ಪ್ರಮೋಷನ್‌ಗಾಗಿ ದೀಪಿಕಾ ಓಡಾಟ ನಡೆಸಿದ್ದು, ಈ ವೇಳೆ ದೀಪಿಕಾ ಹಾಕಿರೋ ಬಟ್ಟೆಗಳ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸಿನಿಮಾ ಪ್ರಮೋಷನ್‌ಗಿಂತ ಮುಂಚೆ ಉದ್ದುದ್ದ ಬಟ್ಟೆಗಳನ್ನು ಹಾಕೋ ಹೀರೋಯಿನ್‌ಗಳು, ಪ್ರಮೋಷನ್‌ನಲ್ಲಿ, ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ, ಚಿಕ್ಕ ಬಟ್ಟೆ ಹಾಕ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದಕ್ಕೆ ದೀಪಿಕಾ ಕಮೆಂಟ್ ಮಾಡಿದ್ದು, ನ್ಯೂಟ್ರಾನ್, ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ನಿಂದ ಈ ಜಗತ್ತು ಆಗಿದೆ ಅಂತ ವಿಜ್ಞಾನಿಗಳು ಹೇಳ್ತಾರೆ. ಆದರೆ ಮೂರ್ಖರ ಬಗ್ಗೆ ಹೇಳೋದನ್ನು ಅವರು ಮರೆತಿದ್ದಾರೆ ಎಂದು ಟ್ರೋಲ್ ಮಾಡುವವರನ್ನು ದೀಪಿಕಾ ಎದುರಿಸಿದ್ದಾರೆ.