ಸಂಸತ್ ಬಜೆಟ್ ಅಧಿವೇಶನ: ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದಾರೆ.

ತಮ್ಮ ಕರ್ತವ್ಯಗಳಿಗೆ ಮೊದಲ ಆದ್ಯತೆ ನೀಡಿ, ಭಾರತದ ಹಕ್ಕುಗಳನ್ನು ಪಡೆಯಲು ಸಹಾಯ ಮಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ತಲೆಬಾಗುತ್ತೇನೆ. 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಹಾದಿಗೆ ಸಹಕರಿಸಿದ, ಕೊಡುಗೆ ನೀಡಿದ ಎಲ್ಲರಿಗೂ ನಾನು ಗೌರವಿಂದ ಸ್ಮರಿಸುತ್ತೇನೆ ಎಂದಿದ್ದಾರೆ. ಈ ವರ್ಷದಿಂದ ಕೇಂದ್ರ ಸರ್ಕಾರ ನೇತಾಜಿಯವರ ಜನ್ಮದಿನ ಜ.23 ರಿಂದ ಗಣರಾಜ್ಯೋತ್ಸವ ಆಚರಣೆ ಆರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಇತಿಹಾಸ ನೆನಪಿನಲ್ಲಿ ಇಡುವುದು ಮುಖ್ಯ. ಇದನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದು ನಮ್ಮ ಸರ್ಕಾರ ನಂಬುತ್ತದೆ ಎಂದಿದ್ದಾರೆ.

ಕೋವಿಡ್-19  ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಮೋದಿ ಸರ್ಕಾರ ಅದನ್ನು ನಿಭಾಯಿಸಿದ ಪರಿಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದ್ದಾರೆ. ಲಸಿಕೆಗಳು ಇಲ್ಲಿ ಮುಖ್ಯ ಪಾತ್ರ ವಹಿಸಿವೆ, ಕೋಟ್ಯಂತರ ಜನರ ಜೀವ ಉಳಿಸಲು ಲಸಿಕೆ ಸಹಾಯ ಮಾಡಿವೆ. ಇದರ ಜತೆಗೆ ನಮ್ಮ ದೇಶದ ಎಲ್ಲ ಕೋವಿಡ್ ವಾರಿಯರ‍್ಸ್ ತಮ್ಮ ಪ್ರಾಣ ಲೆಕ್ಕಿಸದೇ ಜನರ ಜೀವ ಉಳಿಸಲು ಸಹಕರಿಸಿದ್ದಾರೆ ಇವರಿಗೂ ನನ್ನ ಅಭಿನಂದನೆಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!