ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಅವರು ಪೂರ್ಣ ಪ್ರಮಾಣದ ಜಾಮೀನು ಪಡೆದು ಕೋರ್ಟ್ನಿಂದ ಹೊರ ಬಂದಿದ್ದಾರೆ. ಅವರ ಜೊತೆ ಪವಿತ್ರಾ ಗೌಡ ಸೇರಿ ಅನೇಕರಿಗೆ ಜಾಮೀನು ಸಿಕ್ಕಿದೆ.
ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಲು ಬೆಂಗಳೂರು ಪೊಲೀಸರು ಇದೀಗ ರೆಡಿ ಆಗಿದ್ದಾರೆ. ಗೃಹ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ದರ್ಶನ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ದರ್ಶನ್ ಅವರು ಆರಂಭದಲ್ಲಿ ಸರ್ಜರಿಯ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರು. ಆ ಬಳಿಕ ಪೂರ್ಣ ಪ್ರಮಾಣದ ಜಾಮೀನು ಪಡೆದರು.
ಈಗಾಗಲೇ ಗೃಹ ಇಲಾಖೆಯಿಂದ ಅನುಮತಿ ನೀಡಿ ಕಡತ ರವಾನೆ ಆಗಿದೆ. ಶೀಘ್ರದಲ್ಲೇ ಸುಪ್ರೀಂಕೋರ್ಟ್ಗೆ ಪೊಲೀಸರು ಮೇಲ್ಮನವಿ ಸಲ್ಲಿಸಲಿದ್ದಾರೆ.