ನಟಿ ರಶ್ಮಿಕಾ- ವಿಜಯ್‌ ಗೆ ಸಂಕಷ್ಟ: ʻವಾರಿಸುʼ ಚಿತ್ರಕ್ಕೆ ನೊಟೀಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ ರಶ್ಮಿಕಾ ಮಂದಣ್ಣ ದಳಪತಿ ವಿಜಯ್‌ ಕಾಂಬಿನೇಶನ್‌ನ ʻವಾರಿಸುʼ ಚಿತ್ರ ಪ್ರಾಣಿಗಳನ್ನು ಅನುಮತಿ ಇಲ್ಲದೇ ಸಿನಿಮಾದಲ್ಲಿ ಬಳಸಿಕೊಂಡಿದ್ದಕ್ಕಾಗಿ ಪ್ರಾಣಿ ದಯಾ ಸಂಘದವರು ನೋಟಿಸ್ ನೀಡಿದೆ.

ಸಿನಿಮಾ ಅಧಿಕಾರಿಗಳ ಅನುಮತಿ ಇಲ್ಲದೆ ಸಿನಿಮಾ ತಂಡ ಚಿತ್ರೀಕರಣದಲ್ಲಿ ಆನೆಗಳನ್ನು ಬಳಸಿಕೊಂಡ ಪರಿಣಾಮ ಪ್ರಾಣಿ ದಯಾ ಸಂಘ ನೋಟಿಸ್‌ ನೀಡಿದೆ. ಈ ಬಗ್ಗೆ ಮುಂದಿನ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಅರಣ್ಯಾಧಿಕಾರಿಗಳು ʻವಾರಿಸುʼ ತಂಡಕ್ಕೆ ಸೂಚಿಸಿದ್ದಾರೆ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿಯಮಗಳ ಪ್ರಕಾರ ಶೂಟಿಂಗ್‌ನಲ್ಲಿ ಪ್ರಾಣಿಗಳನ್ನು ಬಳಸಿಕೊಂಡರೆ ಪ್ರತಿಯೊಬ್ಬ ವ್ಯಕ್ತಿಯು ನೋಂದಾಯಿಸಿಕೊಳ್ಳಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!