ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಬಲಪಂಥೀಯ ನಾಯಕರು ಬಲಿಷ್ಠಗೊಳ್ಳುತ್ತಿರುವುದು ಲಿಬರಲ್ ನೆಟ್ವರ್ಕ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
ವಾಷಿಂಗ್ ಟನ್ ಡಿಸಿ ಯಲ್ಲಿ ನಡೆದ ಕನ್ಸರ್ವೇಟೀವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪಿಎಸಿ) ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಮೆಲೊನಿ, ಡೊನಾಲ್ಡ್ ಟ್ರಂಪ್, ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್, ಪ್ರಧಾನಿ ಮೋದಿ ಅವರನ್ನು ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಲಿಬರಲ್ ಗಳಿಗೆ ಬಲಪಂಥೀಯ ನಾಯಕರು ಬಲಿಷ್ಠವಾಗುತ್ತಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹತಾಶರಾಗುತ್ತಿದ್ದಾರೆ.
90ರ ದಶಕದಲ್ಲಿ ಬಿಲ್ ಕ್ಲಿಂಟನ್ ಹಾಗೂ ಟೋನಿ ಬ್ಲೇರ್ ಜಾಗತಿಕ ಲೆಫ್ಟಿಸ್ಟ್ ಲಿಬರಲ್ ನೆಟ್ವರ್ಕ್ ನ್ನು ಸೃಷ್ಟಿಸಿದರು, ಆಗ ಅವರನ್ನು ಮುತ್ಸದ್ದಿ ಎಂದು ಕರೆಯಲಾಗಿತ್ತು, ಈಗ ಟ್ರಂಪ್, ಮೆಲೋನಿ (ಜೇವಿಯರ್) ಮಿಲೀ, ನರೇಂದ್ರ ಮೋದಿ ಅವರು ಮಾತನಾಡಿದರೆ, ಅವರುಗಳನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರೆಯುತ್ತಿದ್ದಾರೆ. ಇದು ಎಡಪಂಥೀಯರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಇದನ್ನು ನಾವು ಹಲವು ವರ್ಷಗಳಿಂದ ಗಮನಿಸುತ್ತಿದ್ದೇವೆ, ಇಷ್ಟೆಲ್ಲದರ ನಡುವೆ ಒಂದು ಒಳ್ಳೆಯ ಸುದ್ದಿ ಏನೆಂದರೆ, ಜನರು ಈ ಎಡಪಂಥೀಯರ ಸುಳ್ಳುಗಳನ್ನು ನಂಬಲು ಈಗ ತಯಾರಿಲ್ಲ. ನಮ್ಮ ಮೇಲೆ ಇವರು ಎಷ್ಟೇ ಕೆಸರು ಎರೆಚಿದರೂ ಜನತೆ ನಮಗೆ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಎಂದು ಪ್ರಧಾನಿ ಮೆಲೋನಿ ಹೇಳಿದ್ದಾರೆ.
ಎಡಪಕ್ಷಗಳು ಇಂದು ಆತಂಕಗೊಂಡಿವೆ. ಟ್ರಂಪ್ ಅವರ ಗೆಲುವಿನೊಂದಿಗೆ, ಅವರ ಕಿರಿಕಿರಿ ಉನ್ಮಾದವಾಗಿ ಮಾರ್ಪಟ್ಟಿದೆ. ಸಂಪ್ರದಾಯವಾದಿಗಳು ಗೆಲ್ಲುತ್ತಿರುವುದರಿಂದ ಮಾತ್ರವಲ್ಲ, ಸಂಪ್ರದಾಯವಾದಿಗಳು ಈಗ ಜಾಗತಿಕವಾಗಿ ಪರಸ್ಪರ ಸಹಕರಿಸುತ್ತಿರುವುದರಿಂದ, ಎಡಪಂಥೀಯರು ಹತಾಶಗೊಂಡಿದ್ದಾರೆ ಎಂದು ಮೆಲೋನಿ ಅಭಿಪ್ರಾಯಪಟ್ಟಿದ್ದಾರೆ.
ಇಟಲಿಯ ಬಲಪಂಥೀಯ ಬ್ರದರ್ಸ್ ಪಕ್ಷದ ನಾಯಕಿಯಾಗಿ, ಜನವರಿಯಲ್ಲಿ ಅಧ್ಯಕ್ಷ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಯುರೋಪಿಯನ್ ಒಕ್ಕೂಟದ ಸರ್ಕಾರದ ಮುಖ್ಯಸ್ಥೆ ಪಿಎಂ ಮೆಲೋನಿ ಆಗಿದ್ದಾರೆ. ಸಿಪಿಎಸಿಯನ್ನು ಉದ್ದೇಶಿಸಿ ಮಾತನಾಡುವ ಪಿಎಂ ಮೆಲೋನಿ ಅವರ ನಿರ್ಧಾರಕ್ಕೆ ರೋಮ್‌ನಲ್ಲಿರುವ ಅವರ ರಾಜಕೀಯ ವಿರೋಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಫ್ರಾನ್ಸ್‌ನ ರಾಷ್ಟ್ರೀಯ ರ್ಯಾಲಿ (ಆರ್‌ಎನ್) ಪಕ್ಷದ ನಾಯಕಿ ಜೋರ್ಡಾನ್ ಬಾರ್ಡೆಲ್ಲಾ ಅವರ ನಾಯಕತ್ವದಲ್ಲಿ, ಬ್ಯಾನನ್ ಅವರ ನಡೆಯಲ್ಲಿ ನಾಜಿ ಸಿದ್ಧಾಂತವನ್ನು ಸೂಚಿಸುವ ಲಕ್ಷಣ ಎಂದು ವಿವರಿಸಿದ ಕಾರಣ ಸಿಪಿಎಸಿಯಿಂದ ಹಿಂದೆ ಸರಿದ ನಂತರ, ವಿರೋಧ ಪಕ್ಷದ ಸಂಸದರು ಪಿಎಂ ಮೆಲೋನಿ ಅವರ ಭಾಗವಹಿಸುವಿಕೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.