ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ಇದರ ನಡುವೆ ಅಮೆರಿಕಕ್ಕೆ ಸಿಸಿಲಿಯ ಸಿಗೊನೆಲ್ಲಾ ವಾಯುನೆಲೆಯನ್ನು ಬಳಸಲು ಇಟಲಿ ನಿರಾಕರಿಸಿದೆ.
ಅಮೆರಿಕದ ವಿಮಾನಗಳ ಹಾರಾಟದ ಸುಳಿವು ಇಟಲಿಗೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಇಟಲಿಯ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ, ಸಿಗೊನೆಲ್ಲಾ ನೆಲೆಯ ಬಳಕೆಗೆ ನಿರಾಕರಣೆ ಮಾಡಿದ್ದಾರೆ.
ಇಟಲಿಯ ವಾಯುಪ್ರದೇಶವನ್ನು ಪ್ರವೇಶಿಸುವಾಗ ಅಥವಾ ಇಳಿಯುವಾಗ ಅನುಮತಿ ಕಡ್ಡಾಯವಾಗಿದ್ದು, ಆದರೆ ಅಮೆರಿಕ ಯಾವುದೇ ರೀತಿಯ ನಿಯಮ ಪಾಲಿಸಲಿಲ್ಲ ಎಂದು ಇಟಲಿ ತಿಳಿಸಿದೆ.
ಅಮೆರಿಕದ ಯುದ್ಧ ವಿಮಾನಗಳಾಗಿದ್ದು, ಆದರೆ ನಮ್ಮ ದ್ವಿಪಕ್ಷೀಯ ಒಪ್ಪಂದ, ಕೇವಲ ಸಿಗೊನೆಲ್ಲಾ ವಾಯುನೆಲೆಯನ್ನು ಲಾಜಿಸ್ಟಿಕಲ್ ಮತ್ತು ತರಬೇತಿ ಉದ್ದೇಶಗಳಿಗಾಗಿ ಬಳಸಲು ಅನುಮತಿ ನೀಡಲು ಮಾತ್ರ . ಹಾಗಾಗಿ ಯುದ್ಧ ಕಾರ್ಯಾಚರಣೆಗಳಿಗೆ ನೆಲೆ ಬಳಸಲು ಅವಕಾಶವಿಲ್ಲ ಎಂದು ಇಟಲಿ ತಿಳಿಸಿದೆ.



