October 9, 2026
Friday, October 9, 2026
spot_img

ಯುದ್ಧ ವಿರಾಮದತ್ತ ಟ್ರಂಪ್ ಚಿತ್ತ: ಇರಾನ್ ಮೇಲಿನ ಮಿಲಿಟರಿ ದಾಳಿ ತಾತ್ಕಾಲಿಕ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಸುಮಾರು ಎರಡು ವಾರಗಳಿಂದ ಇರಾನ್ ಭೂಪ್ರದೇಶದ ಮೇಲೆ ಅಮೆರಿಕ ಪಡೆಗಳು ನಡೆಸುತ್ತಿದ್ದ ಸತತ ಬಾಂಬ್ ದಾಳಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರನೆ ಅಮಾನತುಗೊಳಿಸಿದ್ದಾರೆ. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆ ಮತ್ತು ಸಂಭಾವ್ಯ ಒಪ್ಪಂದಗಳ ಕುರಿತು ಮುಕ್ತ ಮಾತುಕತೆಗೆ ಹಾದಿ ಮಾಡಿಕೊಡುವ ಉದ್ದೇಶದಿಂದ ಈ ಪ್ರಮುಖ ಹೆಜ್ಜೆ ಇಡಲಾಗಿದೆ.

ಸೇನಾ ಪಡೆಗಳಿಗೆ ವಾಷಿಂಗ್ಸನ್ ನಿರ್ದೇಶನ

ನಿರಂತರ 13 ದಿನಗಳ ಕಾಲ ನಡೆದ ಕ್ಷಿಪಣಿ ದಾಳಿಯ ಬಳಿಕ, ಶುಕ್ರವಾರದಿಂದ ಯಾವುದೇ ಹೊಸ ಮಿಲಿಟರಿ ಕಾರ್ಯಾಚರಣೆ ನಡೆಸದಂತೆ ಪೆಂಟಗನ್ ಪಡೆಗಳಿಗೆ ಶ್ವೇತಭವನ ಕಟ್ಟುನಿಟ್ಟಿನ ಆಜ್ಞೆ ಮಾಡಿದೆ.

ಕ್ಷಿಪಣಿ ನಿರೋಧಕಗಳ ಕೊರತೆ ಭೀತಿ

ಸತತ ಸಮರದ ಪರಿಣಾಮವಾಗಿ ಅಮೆರಿಕದ ಮಿಲಿಟರಿ ಬಲದಲ್ಲಿದ್ದ ‘ಪೇಟ್ರಿಯಾಟ್ ಇಂಟರ್‌ಸೆಪ್ಟರ್’ ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ದಾಸ್ತಾನು ಗಣನೀಯವಾಗಿ ಕುಸಿದಿದೆ ಎಂದು ಪೆಂಟಗನ್ ಮೂಲಗಳು ತಿಳಿಸಿವೆ. ಪ್ರಸ್ತುತ ದಾಳಿ ಮುಂದೂಡಿಕೆಗೆ ಈ ತಾಂತ್ರಿಕ ಹಿನ್ನಡೆಯೂ ಒಂದು ಪ್ರಮುಖ ಕಾರಣ ಎನ್ನಲಾಗಿದೆ.

ಶಾಂತಿ ಸ್ಥಾಪನೆಗೆ ಒಮಾನ್ ಮಧ್ಯಸ್ಥಿಕೆ

ಮತ್ತೊಂದೆಡೆ, ಉದ್ವಿಗ್ನ ವಾತಾವರಣ ಶಮನಗೊಳಿಸಲು ಒಮಾನ್ ದೇಶದ ರಾಯಭಾರಿಗಳು ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ಜಾಗತಿಕ ವಾಣಿಜ್ಯ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯ ಸುರಕ್ಷತೆ ಮತ್ತು ಗಡಿ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆಗಳು ಆರಂಭವಾಗಿವೆ.

Must Read