ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಠಕ್ಕರ್ ನೀಡಲು ಮುಂದಾದ ಚೀನಾ ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಶೇ.84ಕ್ಕೆ ಹೆಚ್ಚಿಸಿದೆ.
ಚೀನಾ ಈ ಮುಂಚೆ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಇದೀಗ ಅದನ್ನು ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದೆ.
ಇದೀಗ ಈ ಚೀನಾದ ಪ್ರತೀಕಾರದ ಸುಂಕಗಳನ್ನು ತಪ್ಪಿಸಿಕೊಳ್ಳಲು ಕಂಪನಿಗಳು ಅಮೆರಿಕಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.
‘ನಿಮ್ಮ ಕಂಪನಿಯನ್ನು ಆಪಲ್‌ನಂತೆ ಅಮೆರಿಕಕ್ಕೆ ಸ್ಥಳಾಂತರಿಸಲು ಇದು ಉತ್ತಮ ಸಮಯ ಮತ್ತು ಇತರ ಹಲವು ಕಂಪನಿಗಳು ದಾಖಲೆ ಸಂಖ್ಯೆಯಲ್ಲಿ ಹೀಗೆ ಮಾಡುತ್ತಿವೆ’ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ.