August 29, 2026
Saturday, August 29, 2026
spot_img

ಸಂಜೆಯ ಸ್ನಾಕ್ಸ್‌ಗೆ ಚಟ್‌ಪಟಾ ಪುಚ್ಕಾ ಟ್ರೈ ಮಾಡಿ ನೋಡಿ, ಅಡಿಕ್ಟ್‌ ಆಗೋಗ್ತೀರಿ!

ಸ್ಟಫಿಂಗ್‌ಗೆ ಸಾಮಾಗ್ರಿಗಳು
ಬೇಯಿಸಿದ ಆಲೂಗಡ್ಡೆ ಹಾಗೂ ಕಡ್ಲೆಕಾಳು
ಖಾರದಪುಡಿ
ಹಸಿಮೆಣಸಿನ ಪೇಸ್ಟ್‌
ಉಪ್ಪು
ಚಾಟ್‌ ಮಸಾಲಾ
ಆಮ್‌ಚೂರ್‌ ಪುಡಿ
ಗರಂ ಮಸಾಲಾ
ಈರುಳ್ಳಿ
ಕೊತ್ತಂಬರಿ ಸೊಪ್ಪು

ಪಾನಿ ಮಾಡಲು ಬೇಕಾದ ಸಾಮಾಗ್ರಿಗಳು

ಪುದೀನ
ಕೊತ್ತಂಬರಿ ಸೊಪ್ಪು
ಜೀರಿಗೆ
ನಿಂಬೆಹುಳಿ
ಉಪ್ಪು
ಹಸಿಮೆಣಸು
ಚಾಟ್‌ ಮಸಾಲಾ
ಆಮ್‌ಚೂರ್‌ ಪುಡಿ

ಮಾಡುವ ವಿಧಾನ

ಮೊದಲು ಬೇಯಿಸಿದ ಆಲೂಗಡ್ಡೆಗೆ ಕಡ್ಲೆಕಾಳು, ಉಪ್ಪು, ಖಾರದಪುಡಿ, ಗರಂಮಸಾಲ, ಆಮ್‌ಚೂರ್‌ ಪುಡಿ, ಚಾಟ್‌ ಮಸಾಲಾ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಪೇಸ್ಟ್‌ ಹಾಕಿ ಕೈಯಲ್ಲಿ ಚೆನ್ನಾಗಿ ಮಿದ್ದುಕೊಳ್ಳಿ. ರುಚಿಗೆ ತಕ್ಕಂತೆ ಸ್ಟಫಿಂಗ್‌ ರೆಡಿ ಮಾಡಿಕೊಳ್ಳಿ
ಆನಂತರ ಮಿಕ್ಸಿ ಜಾರಿಗೆ ಪುದೀನ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ
ನಂತರ ಇದಕ್ಕೆ ಉಪ್ಪು, ಚಾಟ್‌ ಮಸಾಲಾ, ಆಮ್‌ಚೂರ್‌ ಪೌಡರ್‌, ನಿಂಬೆಹುಳಿ ಹಾಕಿ ಮಿಕ್ಸ್‌ ಮಾಡಿದ್ರೆ ಪಾನಿ ರೆಡಿ

ರೆಡಿಮೇಡ್‌ ಪೂರಿಯ ಮಧ್ಯಬಾಗವನ್ನು ಓಪನ್‌ ಮಾಡಿ ಇದಕ್ಕೆ ಆಲೂ ಸ್ಟಫಿಂಗ್‌ ಹಾಕಿ ನಂತರ ಪಾನಿಯಲ್ಲಿ ಅದ್ದಿ ತಿನ್ನಬೇಕು. ಬೇಕಿದ್ದಲ್ಲಿ ಮೇಲೆ ಮತ್ತೆ ಕೊತ್ತಂಬರಿ, ಈರುಳ್ಳಿ ಹಾಗೂ ಮಿಕ್ಸ್‌ಚರ್‌ ಕೂಡ ಹಾಕಿಕೊಂಡು ತಿನ್ನಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !