ಹೊಸದಿಗಂತ ಡಿಜಿಟಲ್ ಡೆಸ್ಕ್:
ತ್ವಚೆ ಅಂದವಾಗಿರುವಂತೆ ಮಾಡಲು ದುಬಾರಿ ಬೆಲೆಯ ಕ್ರೀಮ್ ಲೋಷನ್, ಸೀರಮ್ ಗಳಿಗೆ ಮೊರೆಹೋಗುತ್ತಿರುವುದು ಸಾಮಾನ್ಯ. ಈ ರೀತಿಯ ಕೃತಕ ವಸ್ತುಗಳಿಂದ ಅನೇಕ ಬಾರಿ ತ್ವಚೆಯ ಆರೋಗ್ಯಕ್ಕೂ ತೊಂದರೆ ಬರದಿರದು.
ಇವುಗಳ ಬದಲಾಗಿ ನೈಸರ್ಗಿಕವಾಗಿ ಲಭ್ಯವಿರುವ ಮನೆಯ ಅಂಗಳದಲ್ಲಿ ಅಂದವಾಗಿ ಹೂ ಬಿಟ್ಟಿರುವ ದಾಸಾವಾಳಗಳನ್ನು ಬಳಸಿ ತ್ವಚೆಯ ಆರೋಗ್ಯ ಕಾಪಾಡಬಹುದಾಗಿದೆ. ಕಾಂತಿಯುತವಾದ ತ್ವಚೆಯಿರಬೇಕೆಂಬ ಹಂಬಲ ಅನೇಕರದ್ದು. ಆಧುನಿಕ ಜೀವನ ಶೈಲಿಯಿಂದ, ದೈನಂದಿನ ಕಾರ್ಯೋತ್ತಡಗಳಿಂದ ನೈಸರ್ಗಿಕವಾಗಿ ಇದು ಸಾಧ್ಯವಾಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಮನೆಯಲ್ಲಿರುವ ದಾಸಾವಾಳ ಹೂ ಬಳಸಿ ತ್ವಚೆಯ ಆರೋಗ್ಯ ಕಾಪಾಡಬಹುದಾಗಿದೆ. ದಾಸಾವಳಾದ ದಳ ಮತ್ತು ಎಲೆಯ ಪೇಸ್ಟ್ ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲ್ಮೈಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ಹಾಗೂ ಎಣ್ಣೆಯಂಶವನ್ನು ತೆಗೆದು ಚರ್ಮವನ್ನು ಮೃದುಮಾಡಲು ಸಹಾಯಮಾಡುತ್ತದೆ.
ಮೊಡವೆಯೇಳದಂತೆ ಕಾಪಾಡುತ್ತದೆ. ದಾಸವಾಳ ಹೂವು ಹಾಗೂ ಎಲೆಗಳಲ್ಲಿರುವ ಲೋಳೆಯಂಶ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಚರ್ಮದ ಸುಕ್ಕು ತಡೆಯಲು ಸಹಕಾರಿಯಾಗಿದೆ. ಚರ್ಮದಲ್ಲಿರುವ ಕಲೆ ನಿವಾರಣೆಯಾಗಿ ,ಚರ್ಮ ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಅನೇಕ ರೀತಿಯ ತುರಿಕೆ, ಉರಿಯೂತಗಳು ನಿವಾರಣೆಯಾಗುತ್ತದೆ.