Saturday, January 3, 2026

FOOD | ಬಿಸಿ ಬಿಸಿ ಅವರೆಕಾಳು ಸಾಂಬಾರ್‌, ಟೇಸ್ಟಿ ರೆಸಿಪಿ ಟ್ರೈ ಮಾಡಿ ನೋಡಿ..

ಹೇಗೆ ಮಾಡೋದು?

ಮೊದಲು ಬಾಣಲೆಗೆ ಎಣ್ಣೆ ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ ಹಾಕಿ
ನಂತರ ಅದಕ್ಕೆ ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ಎಲ್ಲವೂ ಮೆತ್ತಗಾದ ನಂತರ ಆಫ್‌ ಮಾಡಿ, ಗಸಗಸೆ, ಖಾರದಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಗೋಡಂಬಿ ಹಾಕಿ
ನಂತರ ಕಾಯಿ, ಕೊತ್ತಂಬರಿ ಹಾಕಿ ಮಿಕ್ಸ್‌ ಮಾಡಿ ತಣ್ಣಗಾಗಲು ಬಿಡಿ
ನಂತರ ಮಿಕ್ಸಿ ಮಾಡಿ ಮಸಾಲಾ ಎತ್ತಿಟ್ಟುಕೊಳ್ಳಿ

ಪಾತ್ರೆಗೆ ಎಣ್ಣೆ, ಸಬಸಿಗೆ ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅವರೆಕಾಳು, ಆಲೂಗಡ್ಡೆ, ಕ್ಯಾಪ್ಸಿಕಂ ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ರುಬ್ಬಿದ ಮಸಾಲೆ ಹಾಕಿ, ಉಪ್ಪು ಹಾಕಿ
ನೀರು ಹಾಕಿ ಕನ್ಸಿಸ್ಟೆನ್ಸಿ ಅಡ್ಜಸ್ಟ್‌ ಮಾಡಿದ್ರೆ ಸಾಂಬಾರ್‌ ರೆಡಿ

error: Content is protected !!