September 26, 2026
Saturday, September 26, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 69 | ಮಲೆನಾಡಿನ ಸ್ಪೆಷಲ್‌ ತಿಂಡಿ ಅಕ್ಕಿ ಕಡುಬು- ಕಾಯಿ ಚಟ್ನಿ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಅಕ್ಕಿ ನುಚ್ಚು
ಅನ್ನ
ಉಪ್ಪು

ಮಾಡುವ ವಿಧಾನ
ಮೊದಲು ಅಕ್ಕಿಯನ್ನು ನುಚ್ಚು ಮಾಡಿ ಪುಡಿ ಮಾಡಿಕೊಳ್ಳಿ.
ಆನಂತರ ಒಂದು ಪಾತ್ರೆಗೆ ನೀರು ಹಾಗೂ ಅನ್ನ ಹಾಕಿ ಬಿಸಿ ಮಾಡ್ಕೊಳಿ
ಬಿಸಿಯಾದ ನಂತರ ಅದಕ್ಕೆ ಅಕ್ಕಿ ನುಚ್ಚನ್ನು ಹಾಕಿ ಬೇಯಿಸಿಕೊಳ್ಳಿ
ಬೆಂದ ನಂತರ ಉಂಡೆ ಕಟ್ಟಿ ಮತ್ತೊಮ್ಮೆ ಸ್ಟೀಮ್‌ ಮಾಡಿದ್ರೆ ಕಡುಬು ರೆಡಿ. ಇದನ್ನು ಕಾಯಿ ಚಟ್ನಿ ಜೊತೆ ಸವಿಯಬಹುದು. ಚಿಕನ್‌ ಅಥವಾ ಮೀನಿನ ಸಾರಿನ ಜೊತೆ ಇದು ಇನ್ನೂ ರುಚಿಯಾಗಿರುತ್ತದೆ

ಕಾಯಿ ಚಟ್ನಿಗೆ ಬೇಕಾಗುವ ಪದಾರ್ಥಗಳು
ಕಾಯಿ
ಕಡ್ಲೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಹಸಿಮೆಣಸು
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಹನಿ ಎಣ್ಣೆ ಹಾಕಿ ಹಸಿಮೆಣಸು ಹಾಕಿ ಹುರಿದುಕೊಳ್ಳಿ
ಆನಂತರ ಮಿಕ್ಸಿಗೆ ಫ್ರೆಶ್‌ ಕಾಯಿ, ಕಡ್ಲೆ, ಹಸಿಮೆಣಸು, ಬೆಳ್ಳುಳ್ಳಿ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿದ್ರೆ ಚಟ್ನಿಯೂ ರೆಡಿ

Must Read