ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ಡಿಕ್ಕಿ ಹೊಡೆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ಇಂಡಿಗೋ ವಿಮಾನ ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿತ್ತು. ಇದಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ.
ಈ ವಾಹನ ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡುತ್ತಿತ್ತು. ಸಿಬ್ಬಂದಿಯನ್ನ ಬಿಟ್ಟು ವಾಪಸ್ ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.